ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: ಎ3 ಆರೋಪಿಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಗೆ ಚಿತ್ರದುರ್ಗ ಬಾಲನ್ಯಾಯ ಮಂಡಳಿ ಜಾಮೀನು ಮಂಜೂರು ಮಾಡಿದೆ.
ಎ3 ಆರೋಪಿ ಮುರುಘಾಮಠದ ಉತ್ತರಾಧಿಕಾರಿಯೂ ಆಗಿದ್ದು, ಈತ ಪೋಕ್ಸೋ ಕೇಸ್ ನ ಎರಡೂ ಪ್ರಕರಣದಲ್ಲಿಯೂ ಮೂರನೇ ಆರೋಪಿಯಾಗಿದ್ದಾನೆ.
ಇಂದು ಚಿತ್ರದುರ್ಗದ ಬಾಲನ್ಯಾಯ ಮಂಡಳಿ ಮುಂದೆ ಎ3 ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಬಾಲ ನ್ಯಾಯ ಮಂಡಳಿ ಎ3 ಆರೋಪಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!