ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಕ್ಸೋ ಕೇಸಲ್ಲಿ ಯಡಿಯೂರಪ್ಪ ಬಂಧಿಸಿದಂತೆ ನೀಡಿರೋ ಮಧ್ಯಂತರ ರಕ್ಷಣೆ ತೆರವು ಕೋರಿ ಸಿಐಡಿ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಅರ್ಜಿಯನ್ನು ಇಂದು (ಆಗಸ್ಟ್ 22) ಕೈಗೆತ್ತಿಕೊಂಡ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಬಿಎಸ್ವೈ ಪರ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿದೆ. ಇದರಿಂದ ಯಡಿಯೂರಪ್ಪ ಮತ್ತೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಈ ಅರ್ಜಿ ಲಿಸ್ಟ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಇಂದು ಲಿಸ್ಟ್ ಆಗಿಲ್ಲ. ಮಧ್ಯಾಹ್ನ 2.30ಕ್ಕೆ ವಕೀಲರು ಮನವಿ ಮಾಡಿದ್ರು. ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ಇದೆ. ಅದಕ್ಕೆ ನೀವು ಚಾರ್ಜ್ ಶೀಟ್ ವಜಾಕ್ಕೆ ಕೇಳಲು ಆಗಲ್ಲ. FIR ಅರ್ಜಿ ರದ್ದು ಮಾಡುವ ಅರ್ಜಿ ವಾಪಸ್ ತೆಗೆದುಕೊಂಡು, ಚಾರ್ಜ್ ಶೀಟ್ ವಜಾಗೊಳಿಸಸಲು 482ಎ ಅಡಿ ಬೇರೆ ಅರ್ಜಿ ಸಲ್ಲಿಸಿ ಎಂದರು.
ಈ ಮಧ್ಯೆ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಚುರುಕುಗೊಳಿಸಿದೆ. ಸಮನ್ಸ್ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಗುರುವಾರ ಲೋಕಾಯುಕ್ತ ಕಚೇರಿಗೆ ತೆರಳಿ 2ಗಂಟೆ ವಿಚಾರಣೆ ಎದುರಿಸಿದ್ದಾರೆ. ಲೋಕಾಯುಕ್ತ ಮಧ್ಯಾಹ್ನ 2 ಗಂಟೆಗೆ ಶುರುವಾದ ವಿಚಾರಣೆ ಸಂಜೆ ನಾಲ್ಕು ಗಂಟೆಯವರೆಗೂ ನಡೀತು. ಬಳಿಕ ಮಾತಾಡಿದ ಡಿಸಿಎಂ, ಇವರಿಗಿಂತ ಸಿಬಿಐನವರೇ ಪರವಾಗಿಲ್ಲ. ಒಂದು ದಿನವೂ ಕರೆದಿರಲಿಲ್ಲ. ಏನನ್ನೂ ಕೇಳಿರಲಿಲ್ಲ, ಆದ್ರೆ, ಇವರು ಈಗಲೇ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು. ಅಂದ ಹಾಗೇ, ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಕಳೆದ ವರ್ಷ ಹಿಂಪಡೆದು, ಲೋಕಾಯುಕ್ತಕ್ಕೆ ವಹಿಸಿತ್ತು. ನಂತ್ರ ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಸಂಸ್ಥೆ ಎಫ್‌ಐಆರ್ ದಾಖಲಿಸಿತ್ತು.
ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ,,ಇತರರ ಬಗ್ಗೆ ಮಾತಾಡಲು ಏನು ನೈತಿಕತೆ ಇದೆ ಇವರಿಗೆ,, ಅದಲ್ಲದೆ ಲಿಂಗಾಯತ ನಾಯಕ ಬ್ರಾಂಡ್ ಬೇರೆ,, ಪಕ್ಷದಲ್ಲಿನ ಲಂಗೋಟಿ ನಾಯಕನ ವಿರೋಧಿ ಗುಂಪು ಇವರನ್ನು ಅಕ್ಷರಶಃ ಹೊಸಕಿ ಹಾಕುವರು,, ಈಗಾಗಲೇ ಬಹುತೇಕ ಮಾಧ್ಯಮಗಳು ಬಿಸ್ಕೆಟ್ ಆಶೆಗೆ ನಾಗಪೂರದ ಚೌಕಿದಾರರು ಆಗಿದ್ದಾರೆ
Media is not HONEST. AS. IT. WAS. YEAR’S.
1970. BEFORE. EVERY BODY. WANT’S TO BECOME. RICH. WITHOUT. MUCH. EFFORTS. AND. THAT TO. IN. A. SHORT PERIOD OF TIME. UNLESS ONE. BECOMES. HONEST. . . . HOW CAN A. COUNTRY CAN. DEVLOP.