POETRY | “ಅಪ್ಪ” ಎಂದರೆ ಅಷ್ಟೇ ಸಾಕೆ?

ಮೇಘಾ, ಮಂಗಳೂರು

ಅಪ್ಪ.. ಈ ಹೆಸರೇ ಎಷ್ಟು ಅದ್ಭುತವಾಗಿ ಇದೆ ಅಲ್ವಾ. ಈ ಪದ ಕೇಳಿದ್ರೆ ಏನೋ ಖುಷಿ, ನೆಮ್ಮದಿ, ಶಕ್ತಿ, ಸಹನೆ, ಪ್ರೀತಿ ಎಲ್ಲಾ ಅದ್ಭುತಗಳು ಕೂಡಿರೋ ಪರಮಾತ್ಮ ನನ್ನ ಅಪ್ಪ

ನನ್ನ ಅಪ್ಪ ತುಂಬಾ ಶಾಂತ ಸ್ವಭಾವ ಇರುವ ವ್ಯಕ್ತಿ, ಬಹಳ ಸಹನೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲ ಚತುರ ನನ್ನ ಅಪ್ಪ

ಬೆಂಕಿಯಷ್ಟೇ ಬಿಸಿ ನನ್ನ ಅಪ್ಪನ ಕೋಪ.. ಸಹನಾ ಮೂರ್ತಿ ತಾಳ್ಮೆ ಕಳೆದುಕೊಂಡರೆ ಅಬ್ಬಬ್ಬಾ.. ಆ ಕೆಂಡದಂಥ ಕಣ್ಣನ್ನು ನೋಡಲು ಭಯ

ಒಂದೇ ಕ್ಷಣದಲ್ಲಿ ಮೀಸೆ ಅಂಚ್ಚಿನಲ್ಲಿ ನಕ್ಕುಬಿಟ್ಟರೆ.. ಆಹಾ.. ಸೂರ್ಯಕಾಂತಿಯಂತೆ ಹೊಳೆಯುತ್ತಾರೆ ನನ್ನ ಮುದ್ದು ಅಪ್ಪ

ಮಾತು ತುಸು ಕಮ್ಮಿ, ಆದರೆ ನಿಷ್ಠೆ, ಬುದ್ಧಿವಂತಿಕೆಯಲ್ಲಿ ಸರ್ವ ಶ್ರೇಷ್ಠ ನನ್ನ ಅಪ್ಪ

ಹಲಸಿನ ಹಣ್ಣಿನಂತೆ ಬಲು ಒರಟು.. ಆದರೆ ಸ್ನೇಹ, ಪ್ರೀತಿ ವಿಷಯದಲ್ಲಿ ಖುಷಿಯ ಸಿಹಿ ಹಂಚುವ ಸಾಹುಕಾರ ನನ್ನ ಅಪ್ಪ

ಧೈರ್ಯದಲ್ಲಿ ಮೀರಿಸೋರಿಲ್ಲ.. ಆದರೂ ತನ್ನ ಕುಟುಂಬಕ್ಕೆ ಸಣ್ಣ ನೋವಾದರೂ ಸಹಿಸದ ಕಾಮದೇನು ನನ್ನ ಅಪ್ಪ

ನಂಬಿಕೆಯ ಶಿಖರ… ಯಾರೇ ದೂರವಾದರು ನನ್ನ ಕೈ ಹಿಡಿದು ಗುರಿಯ ಶಿಖರ ಏರಲು ಸದಾ ನನ್ನ ಜೊತೆ ಇರುವರು ನನ್ನ ಅಪ್ಪ

ಪ್ರೀತಿಯ ಖನಿಜ… ಚಿನ್ನ, ಬೆಳ್ಳಿ, ವಜ್ರಕ್ಕಿಂತ ಅಮೂಲ್ಯವಾದ ರತ್ನದ ಖನಿಜ ನನ್ನ ಅಪ್ಪ

ಭಯದ ಕತ್ತಲಲ್ಲಿ ಇದ್ದ ನನ್ನನ್ನು.. ಅಭಯದ ಕವಚವನೊದ್ದಿಸಿ ಬೆಳಕು ತಂದವರು ನನ್ನ ಅಪ್ಪ

ಭಕ್ತಿಯ ಬೀಜ ಬಿತ್ತಿ.. ಜೀವನದ ಪಾಠಕ್ಕಿಂತ ಮಿಗಿಲಾದ ಭಕ್ತಿಯಿಲ್ಲ ಎಂದು ಬೋಧಿಸಿದ ಗುರು ನನ್ನ ಅಪ್ಪ

ಏನೆಂದರೂ ಕಡಿಮೆ ನಿನ್ನ ತ್ಯಾಗಕ್ಕೆ, ಏನೆಂದರೂ ಕಡಿಮೆ ನಿನ್ನ ಪ್ರೀತಿಗೆ, ಏನೆಂದರೂ ಕಡಿಮೆ ನಿನ್ನ ಪ್ರಭುದ್ದತೆಗೆ.

ನೀನು ಬಯಸೋದು ಒಂದೇ.. ನಿನ್ನ ಕುಟುಂಬದಿಂದ ನಿಷ್ಕಲ್ಮಷ ಪ್ರೀತಿ, ವಾತ್ಸಲ್ಯ, ಮಮತೆ, ಕಾಳಜಿ, ನಂಬಿಕೆ

ಇಷ್ಟೆಲ್ಲಾ ಭಾರ ಹೊರೋ ನಿನಗೆ ದಣಿಯದು ಎಂದು… ಆ ಪರಿಶ್ರಮದಿಂದ ನಿನ್ನ ಕುಟುಂಬವನ್ನು ಕಾಪಾಡುವೆ ಮಗುವಿನಂತೆ

ಬೆಟ್ಟದಷ್ಟು ನೋವು ನಿನೊಳಗಿದ್ದರು… ಎದೆ ಕುಗ್ಗದೆ ನಿಲ್ಲುವ ಕಲ್ಲಿನ ಮೂರ್ತಿಯಂತೆ

ಇಷ್ಟೆಲ್ಲಾ ಕೊಡುವ ನಿನ್ನನು ಅಪ್ಪ ಎಂದರೆ ಸಾಕೆ… ಪರಮಾತ್ಮನ ಸ್ವರೂಪವೇ ನನ್ನ ಅಪ್ಪ ಎಂದರೆ ಸಾಕೆ

ಕಾಣದೆ ಇರೋ ದೇವರಿಗಿಂತ.. ಸದಾ ನನ್ನ ಜೊತೆಯಾಗಿ ಬರುವ ಸಾಕ್ಷಾತ್ ದೇವರ ಸ್ವರೂಪ ನನ್ನ ಅಪ್ಪ

ನೀನು ಇರುವಾಗ ಚಿಂತೆ ಏಕೆ ನನಗೆ.. ಆ ದೇವರಿಗಿಂತ ಮೊದಲು ನನ್ನ ಕಷ್ಟಕ್ಕೆ ನಿಲ್ಲುವೆ ಸೈನಿಕನಂತೆ

ನೀ ಇದ್ದರೆ ಸಾಕು ನನಗೆ.. ಬೇರೇನೂ ಬೇಡೆನು ಆ ದೇವರನ್ನು.. ನನ್ನ ಪೂಜ್ಯ ದೇವರು ನೀನು ಅಪ್ಪ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!