ಬೇಕಾಗುವ ಸಾಮಾಗ್ರಿ:
ಕರಿಮೆಣಸು(ಕಾಳು ಮೆಣಸು) ಮೂರು ಟೀ ಸ್ಪೂನ್, ಜೀರಿಗೆ ಕಾಲು ಟೀ ಸ್ಪೂನ್, ಬೆಲ್ಲ ಸ್ವಲ್ಪ, ಉಪ್ಪು ರುಚಿಗೆ ಬೇಕಾದಷ್ಟು, ಇಂಗು, ಎಣ್ಣೆ, ಬೇವಿನೆಲೆ.
ಮಾಡುವ ವಿಧಾನ: ಕಾಳು ಮೆಣಸು, ಜೀರಿಗೆಯನ್ನು ಸರಿಯಾಗಿ ಫ್ರೈಮಾಡಿ ಹುಡಿ ಮಾಡಿ. ಒಂದು ಪಾತ್ರೆಯಲ್ಲಿ ನಾಲ್ಕು ಲೋಟ ನೀರು ಬಿಸಿಗಿಡಿ. ಚೆನ್ನಾಗಿ ಕುದಿಯುತ್ತಿದ್ದಂತೆಯೇ ಹುಡಿಯನ್ನು ಹಾಕಿ. ಬೆಲ್ಲ, ಉಪ್ಪು ಸೇರಿಸಿ ಕುದಿಸಿ. ಚೆನ್ನಾಗಿ ಕುದಿದು ಪರಿಮಳ ಬರುತ್ತಿದ್ದಂತೆಯೇ ಬೇವಿನೆಲೆಯ ಒಗ್ಗರಣೆ ನೀಡಿ. ರುಚಿ ರುಚಿಯಾದ ಖಾರ ಖಾರವಾದ ಕರಿಮೆಣಸಿನ ಸಾರು ರೆಡಿ!