ಹೊಸದಿಗಂತ ಡಿಜಿಟಲ್ ಡೆಸ್ಕ್:
28 ವರ್ಷದ ಬ್ರೆಝಿಲಿಯನ್ ಸಿಂಗರ್ ಡಾರ್ಲಿನ್ ಮೊರೈಸ್‌ಗೆ ವಿಷಕಾರಿ ಜೇಡ ಕಚ್ಚಿ ಮೃತಪಟ್ಟಿದ್ದಾರೆ. ಕೆನ್ನೆಯ ಭಾಗಕ್ಕೆ ಜೇಡ ಕಚ್ಚಿದ್ದು, ಆ ಜಾಗ ಕಪ್ಪಾಗಿ ಕಾಣಿಸುತ್ತಿತ್ತು. ತಕ್ಷಣವೇ ಡಾರ್ಲಿನ್ ಪತ್ನಿ ಜುಲ್ಯೆನ್ನಿ ಲಿಬೋಸಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಪಡೆದ ನಂತರ ಡಾರ್ಲಿನ್‌ರನ್ನು ಡಿಸ್ಜಾರ್ಜ್ ಮಾಡಲಾಗಿತ್ತು. ಆದರೆ ಮನೆಗೆ ಬಂದ ನಂತರ ಮತ್ತೆ ಅಲರ್ಜಿ ರೀತಿಯ ಲಕ್ಷಣಗಳು ಕಾಣಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಡಾರ್ಲಿನ್ ಕೊನೆಯುಸಿರೆಳೆದಿದ್ದಾರೆ.
ಈ ವೇಳೆ ಡಾರ್ಲಿನ್ ದೇಹದ ಬಣ್ಣ ಬದಲಾಗಿತ್ತು ಎಂದು ಲಿಬೋಸಾ ಹೇಳಿದ್ದಾರೆ. ಡಾರ್ಲಿನ್ ಜೊತೆ ಅವರ 18 ವರ್ಷದ ದತ್ತುಪುತ್ರಿಗೂ ಜೇಡ ಕಚ್ಚಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.