Tuesday, March 28, 2023

Latest Posts

ಅಕ್ರಮ ಮಾದಕ ವಸ್ತು ಸಾಗಣೆ : ಪೊಲೀಸರ ದಾಳಿ ಓರ್ವನ ಬಂಧನ

ಹೊಸದಿಗಂತ ವರದಿ ಅಂಕೋಲಾ:

ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ತಾಲೂಕಿನ ಹಿಲ್ಲೂರು ಹೊಳೆಮಕ್ಕಿ ನಿವಾಸಿ ಏಸು ಶಿವು ಗೌಡ (48) ಬಂಧಿತ ಆರೋಪಿಯಾಗಿದ್ದು, ಇನ್ನೋರ್ವ ಆರೋಪಿ ಶಿರಗುಂಜಿ ನಿವಾಸಿ ವೆಂಕು ರೋಮು ಗೌಡ (45) ಓಡಿ ಪರಾರಿಯಾಗಿದ್ದಾನೆ.

ಬಂಧಿತರಿಂದ ಸುಮಾರು 6500 ರೂಪಾಯಿ ಮೌಲ್ಯದ 132 ಗ್ರಾಂ ಗಾಂಜಾ ತಲಾ 12 ಸಾವಿರ ಮೌಲ್ಯದ ಎರಡು ಮೋಟಾರ್ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತಾಲೂಕಿನ ಶೆಟಗೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 66ರ ಹನಿ ಬೀಚ್ ಕ್ರಾಸಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಂದ ದಾಳಿ ನಡೆದಿದೆ.

ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಮಹಾಂತೇಶ ಬಿ.ವಿ‌, ಪಿ.ಎಸ್.ಐ ಪ್ರೇಮನಗೌಡ ಪಾಟೀಲ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ್, ನಾಗರಾಜ ಹೋತನಹಳ್ಳಿ, ಮನೋಜ ಡಿ, ಗುರುರಾಜ್ ನಾಯ್ಕ, ಸತೀಶ ಅಂಬಿಗ ಮತ್ತು ಪುನೀತ್ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!