ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಾಚೆಗಿನ ಡ್ರೋನ್ ಆಧಾರಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಬೇಧಿಸುವಲ್ಲಿ ಪಂಜಾಬ್ ಪೋಲೀಸರು ಯಶಸ್ವಿಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಮತ್ತು ಅವರಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಬಂಧಿತರಿಂದ 1.01 ಕೋಟಿ ನಗದು, 500 ಗ್ರಾಂ ಹೆರಾಯಿನ್, 17 ಪಿಸ್ತೂಲ್ ಮತ್ತು 400 ಜೀವಂತ ಕಾಟ್ರಿಡ್ಜ್‌ಗಳು, ಎಂಪಿ-4 ರೈಫಲ್ ಮತ್ತು 300 ರೌಂಡ್ ಗುಂಡುಗಳು, ಎರಡು ತೂಕದ ಯಂತ್ರಗಳು ಮತ್ತು ಎರಡು ಕರೆನ್ಸಿ ಎಣಿಕೆ ಯಂತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ತರ್ನ್ ತರನ್‌ನ ಬರ್ವಾಲಾ ಗ್ರಾಮದ ಸುರಿಂದರ್ ಸಿಂಗ್ ಮತ್ತು ಅಮೃತಸರದ ವಲ್ತೋಹಾದ ಸಹೋದರರಾದ ಹರ್ಚಂದ್ ಸಿಂಗ್ ಮತ್ತು ಗುರ್ಸಾಹಿಬ್ ಸಿಂಗ್ ಎಂದು ಗುರುತಿಸಲಾಗಿದೆ. ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಐವರನ್ನು ಬಂಧಿಸಿದ್ದಾರೆ.
ಬುಧವಾರ, ಪಂಜಾಬ್ ಪೊಲೀಸ್‌ನ ಕೌಂಟರ್ ಇಂಟೆಲಿಜೆನ್ಸ್, ಅಮೃತಸರ ತಂಡವು ಜಸ್ಕರನ್ ಸಿಂಗ್ ಮತ್ತು ಅವರ ಸಹಾಯಕ ರತ್ತನ್‌ಬೀರ್ ಸಿಂಗ್ ಎಂದು ಗುರುತಿಸಲಾದ ಕೈದಿ ಸೇರಿದಂತೆ ಮಾಡ್ಯೂಲ್‌ನ ಇಬ್ಬರು ಸದಸ್ಯರನ್ನು ಬಂಧಿಸಿತು. ಅವರು ಗುರುತಿಸಿದ ಸ್ಥಳಗಳಿಂದ ಇದು 10 ವಿದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ.