April 12, 2026
Sunday, April 12, 2026
spot_img

ಅಮೃತಸರದಲ್ಲಿ ಐಎಸ್‌ಐ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ಪೊಲೀಸರು: ಇಬ್ಬರು ಶಂಕಿತರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಅಮೃತಸರದಲ್ಲಿ ಇಂದು ಐಎಸ್ಐ ಪ್ರಾಯೋಜಿತ ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಪೊಲೀಸರು ಒಂದು ಎಕೆ-47, 3 ಗ್ಲಾಕ್ ರಿವಾಲ್ವಾರ್, 2 ಮ್ಯಾಗಜೀನ್‌ಗಳು ಮತ್ತು 36 ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾತನಾಡಿ, ಬಂಧಿತರನ್ನು ಅಮೃತಸರದ ಅಟ್ಟಾರಿಯ ನ್ಯೂ ಅಬಾಡಿಯ ನಿವಾಸಿ ಗುರ್ಸೇವಕ್ ಸಿಂಗ್ ಅಲಿಯಾಸ್ ಸೂರಜ್ ಮತ್ತು ಅಮೃತಸರದ ಛೆಹರ್ತಾದ ಸುಭಾಷ್ ರಸ್ತೆಯ ನಿವಾಸಿ ಅಮರ್ಜಿತ್ ಸಿಂಗ್ ಅಲಿಯಾಸ್ ರೋಹಿತ್ ಎಂದು ಗುರುತಿಸಲಾಗಿದೆ ಆರಂಭಿಕ ವಿಚಾರಣೆಯಲ್ಲಿ ಶಂಕಿತರು ವಿದೇಶಿ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ ಎಂದು ಹೇಳಿದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !