March 12, 2026
Thursday, March 12, 2026
spot_img

ರೈತ ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿಚಾರ್ಜ್‌: ಶೃಂಗೇರಿ, ಕೊಪ್ಪ ಸ್ತಬ್ಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದು, ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದು, ಅನ್ನದಾತನ ಆಕ್ರೋಶಕ್ಕೆ ಕಾರಣವಾಗುದೆ.

ಲಾಠಿಚಾರ್ಜ್‌ ಖಂಡಿಸಿ ಇಂದು ಶೃಂಗೇರಿ, ಎನ್‌, ಆರ್‌, ಪುರ, ಕೊಪ್ಪ, ಖಾಂಡ್ಯ ಹೋಬಳಿ ಬಂದ್‌ಗೆ ಕರೆ ನೀಡಲಾಗಿದೆ . ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಐದುಗಂಟೆವರೆಗೆ ಬಂದ್‌ ಇರಲಿದೆ.

ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋಚಾಲಕರು, ಮಾಲೀಕರ ಸಂಘ, ಬಿಜೆಪಿಯಿಂದ ಬಂದ್‌ಗೆ ಬೆಂಬಲ ನೀಡಿವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಆಗಿದ್ದು, ಬೆಳಿಗ್ಗೆ 11 ಗಂಟೆಗೆ ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

ಒಂದು ವರ್ಷದಲ್ಲಿ ಕಾಡು ಪ್ರಾಣಿಗಳ ದಾಳಿಗೆ 13 ಮಂದಿ ಬಲಿಯಾಗಿದ್ದು, ಒಂದು ವಾರದ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಕೂಡ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಮಲೆನಾಡಿಗರಿಗೆ ಸ್ವಾಂತನ ಹೇಳೋಕು ಬರ್ತಿಲ್ಲ ಎಂದು ಕಿಡಿಕಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !