ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ‘ಪೊಲೀಸ್ ಪದಕ’, ಇಬ್ಬರಿಗೆ ‘ರಾಷ್ಟ್ರಪತಿ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದ 2022ನೇ ಸಾಲಿನ ‘ರಾಷ್ಟ್ರಪತಿ ಪೊಲೀಸ್ ಪದಕ’ ವಿಜೇತರ ಪಟ್ಟಿ ಪ್ರಕಟವಾಗಿದೆ.

ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ಈ ಪದಕಕ್ಕೆ ಈ ಬಾರಿ ಕರ್ನಾಟಕ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಹಾಗೂ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಪೊಲೀಸ್ ಪದಕ ನೀಡಲಾಗುವುದು.

ಈ ಕುರಿತಂತೆ ಕೇಂದ್ರ ಗೃಹ ಇಲಾಖೆಯಿಂದ ಪದಕಗಳ ಪಟ್ಟಿ ಬಿಡುಗಡೆ ಮಾಡಿದ್ದು, 2022ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವಂತೆ ಶೌರ್ಯಕ್ಕಾಗಿ ನೀಡಲಾಗುವ ಪೊಲೀಸ್ ಪದಕವನ್ನು189 ಪೊಲೀಸರಿಗೆ, ರಾಷ್ಟ್ರಪತಿ ಪೊಲೀಸ್ ಪದಕವನ್ನು 88 ಮಂದಿಗೆ ಹಾಗೂ ಉತ್ತಮ ಸೇವೆಗಾಗಿ ನೀಡುವಂತ ಪೊಲೀಸ್ ಪದಕವನ್ನು 662 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ನೀಡಲಾಗುವದು.

ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆದವರ ಪಟ್ಟಿ
ಬನ್ನಿಕಲ್ ದಯಾನಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು
ಹಿತೇಂದ್ರ ಆರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕ್ರೈಂ ಹಾಗೂ ಟೆಕ್ನಿಕಲ್ ಸರ್ವಿಸ್, ಬೆಂಗಳೂರು

ಪೊಲೀಸ್ ಪದಕ ವಿಜೇತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಪಟ್ಟಿ
ಡಾ.ಬಿ.ಆರ್.ರವಿಕಾಂತೇಗೌಡ, ಡಿಐಜಿ, ಸಂಚಾರಿ ಪೊಲೀಸ್, ಬೆಂಗಳೂರು
ರಾಮಯ್ಯ ಜನಾರ್ಧನ್, ಕಮಾಂಡೆಂಟ್, 5ನೇ ಬೆಟಾಲಿಯನ್, ಕೆ ಎಸ್ ಆರ್ ಪಿ ಮೈಸೂರು
ಡಿ.ಕುಮಾರ್, ಎಸಿಪಿ, ಹಲಸೂರು ಉಪ ವಿಭಾಗ, ಬೆಂಗಳೂರು
ಪ್ರಭುದೇವ್ ರವಿಪ್ರಸಾದ್, ಡಿಸಿಪಿ, ಹುಣಸೂರು ಉಪ ವಿಭಾಗ, ಮೈಸೂರು
ವೆಂಕಟಪ್ಪ ನಾಯಕ ಹೆಚ್ ಓಲೇಕರ್, ಡಿಸಿಪಿ, ಸಿಂಧನೂರು ಉಪ ವಿಭಾಗ, ರಾಯಚೂರು
ಮಲ್ಲೇಶಯ್ಯ ಎಂ, ಡಿಸಿಪಿ, ಆನೇಕಲ್ ಉಪ ವಿಭಾಗ
ಯಶವಂತ ಕುಮಾರ್ ಕೆ ನಾಗ ನಾಯ್ಕ್, ಡಿಸಿಪಿ, ಸೈಬರ್ ಕ್ರೈಂ ವಿಭಾಗ, ಸಿಐಡಿ ಕಾರ್ಲಟೌನ್ ಹೌಸ್, ಬೆಂಗಳೂರು
ಗಂಗಾಧರ ಬಸವರಾಜ್ ಮಟಪತಿ, ಎಸಿಪಿ, ಪೊಲೀಸ್ ಕಮೀಷನರ್, ಕಲಬುರ್ಗಿ ನಗರ
ಕೆ.ಎಂ.ರಮೇಶ್, ಡಿಎಸ್ಪಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು
ಎಸ್ ಬಿ ಕೆಂಪಯ್ಯ, ಡಿಎಸ್ಪಿ, ಸಿಐಡಿ, ಬೆಂಗಳೂರು
ಕೃಷ್ಣ ಮೂರ್ತಿ ಎಸ್, ಪಿಐ, ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ
ಸಿ ಎಸ್ ಸಿಂಪಿ, ಸ್ಪೆಷಲ್ ಎಆರ್.ಎಸ್‌ಐ, 1ನೇ ಬೆಟಾಲಿಯನ್, ಕೆ ಎಸ್ ಆರ್ ಪಿ, ಬೆಂಗಳೂರು
ಡಿ.ಜಿ.ಮೊಹ್ಮಮದ್ ನೀಫ್, ಎಸ್ ಆರ್ ಎಸ್ ಐ, ಡಿಎಆರ್, ಬೆಳಗಾವಿ
ಎಂ.ಹೆ. ರೇವಣ್ಣ, ಎಎಸ್‌ಐ, ಜಾಯಿಂಟ್ ಸಿಪಿ, ಬೆಂಗಳೂರು ನಗರ
ಎಂ ಎಸ್ ಜೋಗದಂಕರ್, ಎಎಸ್‌ಐ, ಡಿಸಿಆರ್ ಬಿ, ಎಸ್ಪಿ ಆಫೀಸ್, ಗದಗ
ವಿಜಯ ಕಾಂಚನ್, ಎಎಸ್‌ಐ, ಮಂಗಳೂರು ಈಸ್ಟ್ ಪೊಲೀಸ್ ಠಾಣೆ
ಎಸ್ ಆರ್ ಮಾರುತಿ ರಾವ್ ಸಿಂಧೆ, ಸಿವಿಲ್ ಪೊಲೀಸ್ ಹೆಡ್ ಕಾನ್ಟೇಬಲ್, ಖಡೇಬಜಾರ್ ಪೊಲೀಸ್ ಠಾಣೆ, ಬೆಳಗಾವಿ
ಲಿಂಗರಾಜಪ್ಪ, ಹೆಡ್ ಕಾನ್ಟೇಬಲ್, ನರಸಿಂಹರಾಜಪುರ ಉಪ ವಿಭಾಗ ಎಸಿಪಿ ಆಫೀಸ್, ಮೈಸೂರು ನಗರ
ವೆಂಕಟೇಶಪ್ಪ ಜಿ ವಿ, ಹೆಡ್ ಕಾನ್ಟೇಬಲ್, ರಾಜ್ಯ ಗುಪ್ತಚರ ವಿಭಾಗ, ಬೆಂಗಳೂರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!