August 30, 2026
Sunday, August 30, 2026
spot_img

ಅಮ್ಮ ಪರೀಕ್ಷೆ ಬರೆಯುವವರೆಗೂ ಕಂದನನ್ನು ಆಡಿಸಿ, ಮಲಗಿಸಿದ ಪೊಲೀಸ್‌ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೊಲೀಸ್‌ ಕಾನ್ಸ್‌ಟೆಬಲ್‌ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಎಂಟು ತಿಂಗಳ ಮಗುವನ್ನು ಪೊಲೀಸ್‌ ಸಿಬ್ಬಂದಿಯೇ ಆಟ ಆಡಿಸಿ, ಜೋಗುಳ ಹಾಡಿ ಮಲಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭಾನುವಾರ ಚೆನ್ನಮ್ಮನಕೆರೆ ಅಚ್ಚುಕಟ್ಟು ವ್ಯಾಪ್ತಿಯ ಕೃಷ್ಣ ಕಾಲೇಜಿನಲ್ಲಿ ಅಭ್ಯರ್ಥಿಯೊಬ್ಬರು ತಮ್ಮ ಎಂಟು ತಿಂಗಳ ಕಂದನ ಜೊತೆ ಪರೀಕ್ಷೆ ಬರೆಯೋದಕ್ಕೆ ಬಂದಿದ್ದಾರೆ. ಎಂಟು ತಿಂಗಳ ಮಗುವಿದ್ದರೂ ಪರೀಕ್ಷೆ ಬರೆಯಲು ಬಂದಿರುವ ಅಭ್ಯರ್ಥಿಯನ್ನು ನೋಡಿ ಅಲ್ಲಿದ್ದವರೆಲ್ಲಾ ಖುಷಿ ಪಟ್ಟಿದ್ದಾರೆ.

ಇತ್ತ ತಾಯಿ ಪರೀಕ್ಷೆ ಬರೆಯಲು ಆರಂಭಿಸಿದಂತೆ ಮಗು ಜೋರಾಗಿ ಅತ್ತಿದೆ. ತಾಯಿಯ ಮನಸ್ಸು ಚುರುಕ್‌ ಎಂದಿದ್ದು, ಪರೀಕ್ಷೆಯೋ ಕಂದನೋ ಎಂದು ಆಲೋಚಿಸಿದ್ದಾರೆ. ಈ ವೇಳೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯ ಸಿಬ್ಬಂದಿ ನೀವು ದುಗುಡ ಬಿಟ್ಟು ಪರೀಕ್ಷೆ ಬರೆಯಿರಿ, ನಿಮ್ಮ ಕಂದನನ್ನು ನಾವು ನೋಡಿಕೊಳ್ತೇವೆ ಎಂದು ಹೇಳಿದ್ದಾರೆ.

ಸಿಬ್ಬಂದಿಯನ್ನು ನಂಬಿ ಕಂದನನ್ನು ಕೊಟ್ಟಿ ತಾಯಿ ಪರೀಕ್ಷೆ ಬರೆದಿದ್ದಾರೆ. ಇತ್ತ ಮಗುವನ್ನು ತೆಗೆದುಕೊಂಡು ಸೀರೆಯಿಂದ ಜೋಲಿ ಮಾಡಿ ಮಗುವನ್ನು ತೂಗಿದ್ದಾರೆ. ಆದರೂ ಅಳು ನಿಲ್ಲಿಸದ ಕಂದನಿಗೆ ಆಟವಾಡಿಸಿ, ಚಪ್ಪಾಳಿ ತಟ್ಟಿ ಖುಷಿ ಪಡಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮಗುವೋ, ಕೆಲಸವೋ ಎಂದು ಆರಿಸುವ ಪರಿಸ್ಥಿತಿ ತಾಯಿಗೆ ಮಾತ್ರ ಬರುತ್ತದೆ. ಸಮಾಜದಲ್ಲಿ ಈ ರೀತಿಯ ಸಪೋರ್ಟ್‌ ಎಲ್ಲ ವಿಷಯದಲ್ಲಿ ಸಿಕ್ಕರೆ ಹೆಣ್ಣುಮಕ್ಕಳು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಕಮೆಂಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !