BREAKING NEWS: ಪಾಕಿಸ್ತಾನ್ ಸುಪ್ರೀಂ ಕೋರ್ಟ್ ಮುಂದೆ ಇಮ್ರಾನ್ ಖಾನ್ ನ್ನು ಹಾಜರುಪಡಿಸಿದ ಪೊಲೀಸರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅನ್ನು ಮೇ 9ರಂದು ಪಾಕ್ ಸರ್ಕಾರವು ಬಂಧಿಸಿತ್ತು. ಈ ಬಂಧನ ಪ್ರಶ್ನಿಸಿ ಇಮ್ರಾನ್ ಖಾನ್ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಪಾಕಿಸ್ತಾನ್ ಸುಪ್ರೀಂ ಕೋರ್ಟ್ ಪಾಕ್ ಪಿಎಂ, ಸರ್ಕಾರದ ನಡೆಯ ಬಗ್ಗೆ ಗರಂ ಆಗಿತ್ತು. ಅಲ್ಲದೇ ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೇ ಮುಂದಿನ ಒಂದು ಗಂಟೆ ಒಳಗಾಗಿ ನ್ಯಾಯಾಲಯದ ಮುಂದೆ ಇಮ್ರಾನ್ ಖಾನ್ ಹಾಜರುಪಡಿಸುವಂತೆ ಆದೇಶ ನೀಡಿತ್ತು.

ಪಾಕ್ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನಲೆಯಲ್ಲಿ, ಇದೀಗ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಆವರಣದ ಸುತ್ತಾಮುತ್ತಾ ಬಿಗಿ ಪೊಲೀಸ್ ಬಂಧೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!