July 17, 2026
Friday, July 17, 2026
spot_img

ಕುಡುತಿನಿಯಲ್ಲಿ ಕ್ಲಬ್ ಗಳ ಮೇಲೆ ಪೊಲೀಸರ ಮಿಂಚಿನ ದಾಳಿ: ಹಣ, ಮೊಬೈಲ್ ಪೊಲೀಸರ ವಶಕ್ಕೆ

ಹೊಸದಿಗಂತ ವರದಿ ಬಳ್ಳಾರಿ:

ಜಿಲ್ಲೆಯ ಕುಡುತಿನಿ ಪಟ್ಟಣದಲ್ಲಿ ಕುರುಗೋಡು ಸಿಪಿಐ ಬಾಳನಗೌಡ ಎಸ್.ಎಂ.ಹಾಗೂ ಪಿಎಸ್ಐ ವಾಣಿ ಅವರ ನೇತೃತ್ವದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕ್ಲಬ್ ಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿ, 2,14,602 ನಗದು ಹಣ, 40 ಮೊಬೈಲ್ ಗಳನ್ನು ಜಪ್ತಿ ಮಾಡಿ, 69 ಜನ ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಪಟ್ಟಣದ ಬಸವೇಶ್ವರ ಸ್ಪೋರ್ಟ್ಸ್ ಆಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಹಾಗೂ ಗುರುರಾಯರರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಗಳಲ್ಲಿ ಮನೋರಂಜನಾ ಕ್ರೀಡಾ ಚಟುವಟಿಕೆಗಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಗದು ಹಣದ ಬದಲಾಗಿ ಪ್ಲಾಸ್ಟಿಕ್ ಕ್ವಾಯನ್ ಗಳ ಮೂಲಕ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ಕುರುಗೋಡು ಸಿಪಿಐ ಬಾಳನಗೌಡ ಎಸ್.ಎಂ.ಹಾಗೂ ಪಿಎಸ್ಐ ವಾಣಿ ಅವರ ನೇತೃತ್ವದ ಕುಡುತಿನಿ ಹಾಗೂ ಕುರುಗೋಡು ಠಾಣೆ ಸಿಬ್ಬಂದಿಗಳ ತಂಡ ದಿಢೀರ್ ದಾಳಿ ನಡೆಸಿ, ಎರಡು ಕ್ಲಬ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಬಿಸಿ ಮುಟ್ಟಿಸಿದ್ದಾರೆ.

ಶ್ರೀ ಬಸವೇಶ್ವರ ಸ್ಪೋರ್ಟ್ಸ್ ಆಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ನಲ್ಲಿ 1,24,577 ನಗದು ಹಣ, 21 ಮೊಬೈಲ್ ಜಪ್ತಿ ಮಾಡಿ, 24 ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಗುರುರಾಯರ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ನಲ್ಲಿ 90,025 ನಗದು ಹಣ, 39 ಮೊಬೈಲ್ ಜಪ್ತಿ ಮಾಡಿಕೊಂಡು, 45 ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಎರಡು ಕ್ಲಬ್ ಗಳಿಗೆ ಬೀಗ ಜಡಿದು, ಪರವಾನಿಗೆ ರದ್ದು ಪಡಿಸಬೇಕು ಎಂದು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !