ಹೊಸದಿಗಂತ ವರದಿ, ಶಿವಮೊಗ್ಗ:
ನಗರದ ಡಿಎಆರ್ ಮೈದಾನದಲ್ಲಿ ಸೋಮವಾರ ಸಂಜೆ ಕಳುವಾಗಿದ್ದ ಬಂಗಾರ, ಬೆಳ್ಳಿಯ ಆ‘ರಣಗಳು, ಮೊಬೈಲ್ ಫೋನ್, ಅಡಿಕೆ, ದ್ವಿಚಕ್ರ ವಾಹನಗಳು, ಇನ್ನೋವಾ ಕಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು ಇನ್ನಿತರೆ ವಸ್ತುಗಳನ್ನು ಮರಳಿ ವಿತರಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, 2024ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ವರದಿ ಆಗಿವೆ. ಅದರಲ್ಲಿ 244 ಪ್ರಕರಣಗಳು ಹಾಗೂ ಹಿಂದಿನ ವರ್ಷದ 54 ಪ್ರಕರಣ ಸೇರಿ ಒಟ್ಟು 298 ಪ್ರಕರಣಗಳನ್ನು ಪೊಲೀಸರು ಬೇದಿಸಿದ್ದಾರೆ. ಇದರ ಅಂದಾಜು ವೌಲ್ಯ ಸುಮಾರು 3,76,99,299 ರೂ.ಗಳು ಎಂದು ತಿಳಿಸಿದರು.
ಒಟ್ಟು 612 ಪ್ರಕರಣಗಳಲ್ಲಿ ಲಾ‘ಕ್ಕಾಗಿ ಕೊಲೆ-02, ದರೋಡೆ-03, ಸುಲಿಗೆ-19,ಸರಗಳ್ಳತನ-04, ಕನ್ನ ಕಳವು-51, ಮನೆ ಕಳ್ಳತನ-14, ಸಾಮಾನ್ಯ ಕಳವು-62, ಜಾನುವಾರು ಕಳವು-06, ವಾಹನ ಕಳವು-70, ವಂಚನೆ ಪ್ರಕರಣ-13 ಇವುಗಳನ್ನು ಪತ್ತೆ ಮಾಡಲಾಗಿದೆ. ಸಿಇಐಆರ್ ಪೋರ್ಟಲ್ ಮುಖಾಂತರ 477 ಮೊಬೈಲ್ ಕಳವು ಪ್ರಕರಣಗಳನ್ನು ಕೂಡ ಪತ್ತೆ ಮಾಡಿ ಮಾಲೀಕರಿಗೆ ಮೊಬೈಲ್ ಹಸ್ತಾಂತರ ಮಾಡಲಾಗುತ್ತಿದೆ. ಇನ್ನುಳಿದ ಪ್ರರಕಣಗಳ ತನಿಖೆ ನಡೆಯುತ್ತಿದೆ ಎಂದರು.
ಹೆಚ್ಚುವರಿ ರಕ್ಷಣಾಕಾರಿ ಕಾರಿಯಪ್ಪ, ವಿವಿ‘ ವಿಭಾಗಗಳ ಡಿವೈಎಸ್‌ಪಿಗಳು, ಪೊಲೀಸ್ ಸಿಬ್ಬಂದಿ ಹಾಜರಿದ್ದರು.