ಜಾರ್ಖಂಡ್ ನಲ್ಲಿ ರಾಜಕೀಯ ಹೈಡ್ರಾಮಾ: ಆಪರೇಶನ್ ಭೀತಿ, ಜೆಎಂಎಂ-ಕಾಂಗ್ರೆಸ್ ಶಾಸಕರು ಹೈದರಾಬಾದ್ ಶಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಹಗರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜೈಲು ಸೇರಿದ್ದು,ಹೀಗಾಗಿ ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸಲು ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಹಿರಿಯ ನಾಯಕ, ಸಾರಿಗೆ ಸಚಿವರಾಗಿದ್ದ ಚಂಪಾಯ್ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಚಂಪಾಯ್ ಈಗಾಗಲೇ ರಾಜ್ಯಪಾಲರಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಆದರೆ ರಾಜ್ಯಪಾಲರ ಅನುಮತಿ ವಿಳಂಬವಾಗುತ್ತಿದ್ದಂತೆ ಇತ್ತ ಇಂಡಿಯಾ ಮೈತ್ರಿ ಪಕ್ಷಗಳ ಸರ್ಕಾರಕ್ಕೆ ಆಪರೇಶನ್ ಭೀತಿ ಎದುರಾಗಿದೆ.

ಬಿಜೆಪಿ ತಮ್ಮ ನಾಯಕರನ್ನು ಆಪರೇಶನ್ ಮಾಡಲಿದೆ ಎಂದು ಬೆದರಿ ಇದೀಗ 43 ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರಿಸುತ್ತಿದೆ.

ಚಂಪಾಯ್ ಸೊರೆನ್ ಸರ್ಕಾರ ರಚಿಸಲು ಜೆಎಂಎಂ ಸೇರಿದಂತೆ ಇತರ ಮೈತ್ರಿ ಪಕ್ಷಗಳ 43 ಶಾಸಕರು ಬೆಂಬಲ ಸೂಚಿಸಿದ್ದರೆ. ಆದರೆ ರಾಜ್ಯಾಪಾಲರು ಸರ್ಕಾರ ರಚಿಸವು ಚಂಪಾಯ್ ಸೊರೆನ್‌ಗೆ ಆಹ್ವಾನ ನೀಡದ ಹಿನ್ನಲೆಯಲ್ಲಿ ಜೆಎಂಎಂ ಪಕ್ಷಕ್ಕೆ ಆತಂಕ ಹೆಚ್ಚಾಗಿದೆ. ಬಿಜೆಪಿ ಶಾಸಕರನ್ನು ಸೆಳೆದು ಹೊಸ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ರಾಂಚಿಯಿಂದ ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ.

ಮುಕ್ತಿ ಮೋರ್ಚಾ ಪಕ್ಷದ ಶಾಸಕರು ರಾಂಚಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಜೆಎಂಎಂ ಶಾಸಕರು ಬಿಜೆಪಿ ಸಂಪರ್ಕಕ್ಕೆ ಬರುವುದನ್ನು ತಡೆಯಲು ಪಕ್ಷವು ಒಂದು 12 ಸೀಟಿನ ಮತ್ತು ಇನ್ನೊಂದು 37 ಸೀಟಿನ ಎರಡು ಚಾರ್ಟಡ್‌ ವಿಮಾನಗಳಲ್ಲಿ ಎಲ್ಲ ಶಾಸಕರನ್ನು ಹೈದರಾಬಾದ್‌ಗೆ ಕರೆದೊಯ್ಯಲು ಸಿದ್ಧತೆ ನಡೆಸಿದೆ. ಒಟ್ಟು 81 ವಿಧಾನಸಭೆ ಬಲ ಹೊಂದಿರುವ ಜಾರ್ಖಂಡ್‌ನಲ್ಲಿ ಸರ್ಕಾರ ರಚನೆಗೆ 41 ಶಾಸಕರ ಬೆಂಬಲ ಬೇಕು. ಜೆಎಂಎಂ-ಕಾಂಗ್ರೆಸ್‌ ಕೂಟಕ್ಕೆ 47 ಸದಸ್ಯರ ಬಲವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!