ದಿನಭವಿಷ್ಯ: ಇಂದು ಈ ರಾಶಿಗೆ ಅದೃಷ್ಟ ಹುಡುಕಿ ಬರುತ್ತೆ!

ಮೇಷ
ವ್ಯವಹಾರದಲ್ಲಿ , ಹಣದ ವಿಚಾರದಲ್ಲಿ ಯಶಸ್ಸು ಸಾಧಿಸುವಿರಿ. ಗುರಿ ಸಾಧಿಸಲು ಸಫಲ. ಕೌಟುಂಬಿಕ ಬೆಂಬಲ. ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ.

ವೃಷಭ
ವೃತ್ತಿಯಲ್ಲಿ ನಿರಾಶೆ. ಸಾಧಿಸಬೇಕೆಂದ ಕಾರ್ಯ  ಈಡೇರದು.  ವೃಥಾ ಅಪವಾದ ಬರಬಹುದು. ಎಚ್ಚರದಿಂದ ಕಾರ್ಯ ನಿರ್ವಹಿಸಿ.

ಮಿಥುನ
ಎಲ್ಲರಿಂದ ಮೆಚ್ಚುಗೆ ಗಳಿಸುವ ಕಾರ್ಯ ಮಾಡುವಿರಿ. ಹಳೆಯ ಹೂಡಿಕೆಯು ಉತ್ತಮ ಫಲ ನೀಡುವುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರವಾದೀತು.

ಕಟಕ
ಮಿಶ್ರಫಲದ ದಿನ. ವೃತ್ತಿಯಲ್ಲಿ ಸಫಲತೆ. ಕಾರ್ಯದಲ್ಲಿ ಯಶಸ್ಸು. ಆದರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಅಸಹಜತೆ ಕಾಡಬಹುದು. ವಿಶ್ರಾಂತಿ ಅಗತ್ಯವಾದೀತು.

ಸಿಂಹ
ಯಶಸ್ವೀ ದಿನ. ನಿಮ್ಮ ಕಾರ್ಯದಲ್ಲಿ ಸಫಲತೆ ಸಿಗುವುದು. ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ವೃತ್ತಿ ಒತ್ತಡ ಕಡಿಮೆ.

ಕನ್ಯಾ
ಸವಾಲಿನ ದಿನ. ಒಂದು ಸಮಸ್ಯೆ ಪರಿಹರಿಸಿದರೂ   ಹೊಸ ಸಮಸ್ಯೆ ಉದಿಸಬಹುದು. ದಿನವಿಡೀ ಒತ್ತಡದಿಂದ ಕಳೆಯಬೇಕಾದೀತು. ಕೌಟುಂಬಿಕ ಭಿನ್ನಮತ.

ತುಲಾ
ಸಂಬಂಧದಲ್ಲಿ  ಏರುಪೇರು. ಸಣ್ಣ ಮಾತಿನ ಚಕಮಕಿ ದೊಡ್ಡ ರಾದ್ಧಾಂತ ಸೃಷ್ಟಿಸಬಹುದು.  ಮಾತಿನ ಮೇಲೆ ನಿಯಂತ್ರಣವಿಡಿ.

ವೃಶ್ಚಿಕ
ವ್ಯಕ್ತಿಯೊಬ್ಬರು ನಿಮ್ಮ ಮನಶ್ಯಾಂತಿ ಕದಡಬಹುದು. ಅವರ ನಡೆನುಡಿ ಬೇಸರ ತರಿಸಬಹುದು. ಸ್ಥಿತಪ್ರಜ್ಞತೆ ಬೆಳೆಸಿ ಕೊಳ್ಳಲು ಕಲಿಯಿರಿ.

ಧನು
ಮನಸ್ಸು ಖಿನ್ನಗೊಳಿಸುವ  ಬೆಳವಣಿಗೆ ಉಂಟಾದೀತು. ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆಪ್ತರೊಬ್ಬರ ವರ್ತನೆ ಯಿಂದ ಬೇಸರ.

ಮಕರ
ನಿಮ್ಮ ಬದುಕಿನಲ್ಲಿ ಕೆಲವು ಪ್ರಮುಖ ಬದಲಾವಣೆ ಮಾಡಬೇಕಾದೀತು.   ಸಮಸ್ಯೆಗಳನ್ನೆ ಚಿಂತಿಸುತ್ತಾ ಕೂರದಿರಿ, ಪರಿಹಾರದ ಕುರಿತು ಆಲೋಚಿಸಿರಿ.

ಕುಂಭ
ನಿಮ್ಮ ಸಾಮರ್ಥ್ಯದ ಅನಾವರಣ ಇಂದು ಆಗುವುದು. ಇದು ನಿಮ್ಮ ಉನ್ನತಿಗೂ ಕಾರಣವಾಗುವುದು. ಆರ್ಥಿಕ ಸ್ಥಿತಿ ಉತ್ತಮ. ಕೌಟುಂಬಿಕ ನೆಮ್ಮದಿ.

ಮೀನ
ವೃತ್ತಿ ಕ್ಷೇತ್ರದಲ್ಲಿ ಶುಭಸುದ್ದಿ ಕೇಳುವಿರಿ. ನೀವು ಬಯಸಿದ ಬೆಳವಣಿಗೆ. ಖಾಸಗಿ ಬದುಕಲ್ಲಿ ಹೊಸ ಒತ್ತಡಗಳು ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!