Friday, October 7, 2022

Latest Posts

ರಾಜಕೀಯ ಪಕ್ಷಗಳು ಇಬ್ಭಾಗ, ಧಾರ್ಮಿಕ ಸಂಘರ್ಷಗಳು ಉಲ್ಬಣ: ಮತ್ತೆ ಭವಿಷ್ಯ ನುಡಿದ ಕೋಡಿಮಠ ಶ್ರೀ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶುಭಕೃತ ನಾಮಸಂವತ್ಸರ ದೇಶದಲ್ಲಿ ಅಶುಭವನ್ನುಂಟು ಮಾಡಲಿದೆ. ಹಿಂಗಾರು ಮಳೆ ಕಡಿಮೆಯಾಗಿ ಅಕಾಲಿಕ ಮಳೆಯಾಗಲಿದೆ. ರೋಗ ರುಜಿನಗಳು ಕಾಣಿಸಿಕೊಳ್ಳಲಿವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಜೀಣೋರ್ದ್ಧಾರವಾಗುತ್ತಿರುವ ಶ್ರೀ ಕುಮಾರ ಕಂಪಿನ ಸಿದ್ಧವೃಷಭೇಂದ್ರ ಕತೃ ಗದ್ದುಗೆಯ ಶಿಲಾಮಯ ಕಟ್ಟಡದ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ, ಕತೃ ಗದ್ದುಗೆಯ ದರ್ಶನ ಪಡೆದ ನಂತರ ಮಾತನಾಡಿದರು.

ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯ ಮಾಡಿತು. ಪೂರ್ಣ ಪ್ರಮಾಣದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾಡಿನಲ್ಲಿ ಬೆಂಕಿ ಅನಾಹುತ ಸಂಭವಿಸುವ ಲಕ್ಷಣವಿದೆ ಎಂದೆನಿಸುತ್ತದೆ.

ಕಾರ್ತಿಕ ಮಾಸದಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಇಬ್ಭಾಗವಾಗುವ ಸಂಭವವಿದೆ. ಮತಾಂಧತೆಯಿಂದಾಗಿ ಧಾರ್ಮಿಕ ಸಂಘರ್ಷಗಳು ನಡೆಯುತ್ತಿದ್ದು ನೈಜ ಜ್ಞಾನದ ಕೊರತೆಯೇ ಕಾರಣ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!