ಡಿ ಕೆ ಸುರೇಶ್ ವರ್ತನೆಯಿಂದ ರಾಜಕಾರಣಿಗಳು ತಲೆತಗ್ಗಿಸುವಂತಾಗಿದೆ: ಹೇಮಂತ್ ಕುಮಾರ್ ಗೌಡ

ಹೊಸದಿಗಂತ ವರದಿ, ಮೈಸೂರು:

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಮಂತ್ರಿಗಳಿರುವ ವೆದಿಕೆಯಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿ ಅವರ ಗೂಂಡಾ ವರ್ತನೆ ನಡೆಸಿ ಕರ್ನಾಟಕದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಎಂದು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಕಿಡಿಕಾರಿದ್ದಾರೆ.
ಗೂಂಡಾಗಿರಿ ಮಾಡುವ ಪಕ್ಷ ನಮ್ಮದಲ್ಲ ಹಾಗಂತ ಗೂಂಡಾಗಿರಿಗೆ ಹೆದುರುವುದು ಇಲ್ಲ. ಅವರ ಅಹವಾಲು ಇದ್ದರೆ, ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದನ್ನು ಬಿಟ್ಟು, ಸಚಿವ ಡಾ ಅಶ್ವಥ್ ನಾರಾಯಣ್ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ವರ್ತನೆ ಖಂಡಿನೀಯ ಎಂದು ಹೇಳಿದ್ದಾರೆ. .
ಡಿ.ಕೆ.ಸುರೇಶ್ ಅವರ ಗೂಂಡಾಗಿರಿ ಕನಕಪುರದಲ್ಲಿ ನಡೆಯಬಹುದು ವಿನ ಕರ್ನಾಟಕದಲ್ಲಿ ನಡೆಯುವುದಿಲ್ಲ . ಜನತೆ ನಿಮ್ಮ ವರ್ತನೆ ನೋಡಿ ಜನತೆ ಬೇಸತ್ತಿದ್ದಾರೆ .ಗೂಂಡಾ ವರ್ತನೆ ಬದಲಾಯಿಸಬೇಕು, ಇಲ್ಲವಾದಲ್ಲಿ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ.
ಗೃಹ ಸಚಿವರು ಡಿ.ಕೆ.ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಾಡಿನಲ್ಲಿ ಶಾಂತಿಯನ್ನು ಕಾಪಾಡಬೇಕು,ಡಿ ಕೆ ಸುರೇಶ್ ತೋರಿರುವ ವರ್ತನೆ ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ .ಇವರು ಒಬ್ಬ ಸಂಸದ ಅನ್ನೋದಿಕ್ಕೆ ನಾಲಾಯ್ಕ್ ಆಗಿದ್ದು .ನಾಚಿಕೆ ತರುವ ರೀತಿಯಲ್ಲಿ ವರ್ತಿಸಿರುವುದು ನಾಡಿನ ಜನತೆ ತಲೆ ತಗ್ಗಿಸುವಂತಾಗಿದೆ .ಅವರು ತಕ್ಷಣವೇ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಒಬ್ಬನೇ ಕಾಂಗ್ರೆಸ್ ಸಂಸದನಿದ್ದು ಗೂಂಡಾಗಳoತೆ ವರ್ತಿಸಿದ್ದಾರೆ. ಕಾಂಗ್ರೆಸ್‌ಗೆ ಜನ ಪಾಠ ಕಲಿಸಿದರು ಬುದ್ಧಿ ಬಂದಿಲ್ಲ .ಡಿ ಕೆ ಸುರೇಶ್ ವರ್ತನೆಯಿಂದ ರಾಜಕಾರಣಿಗಳು ತಲೆತಗ್ಗಿಸುವಂತಾಗಿದೆ. ಅದರಲ್ಲೂ ವಿಧಾನಪರಿಷತ್ ಸದಸ್ಯ ರವಿಕುಮಾರ್, ಸಚಿವ ಅಶ್ವತ್ ನಾರಾಯಣ್ ಅವರ ಕೈಯಲ್ಲಿದ್ದ ಮೈಕ್ ನ್ನು ಕಿತ್ತು ರಂಪಾಟ ಮಾಡಿದ್ದಾರೆ. ಅವರಿಗೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!