ಹೊಸದಿಗಂತ ವರದಿ,ವಿಜಯಪುರ:
ಬಿಜೆಪಿಯವರು ರಾಜಕಾರಣ ಮಾಡುತ್ತಾರೆ ಎಂಬುದು ಸಾಬಿತಾಗಿತ್ತು, ಸದ್ಯ ಮತ್ತೆ ಸಾಬಿತಾಗಿದೆ ಎಂದು ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ವಿಚಾರ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಇದಕ್ಕಿಂತ ಮೊದಲು ಬಂದ ಕೇಸ್‌ಗಳಿಗೆ ಅನುಮತಿ ಕೊಡೊದಿಲ್ಲ. ನಿನ್ನೆ ಮಾಡಿದ ಕೇಸ್‌ಗೆ ಅನುಮತಿ ಕೊಡುತ್ತಾರೆ. 24 ಗಂಟೆಯಲ್ಲಿ ಕೇಸ್ ದಾಖಲು ಮಾಡುತ್ತಾರೆ. ಅದನ್ನ ಪರಿಶೀಲನೆ ಮಾಡದೆ ಅನುಮತಿ ನೀಡಿದ್ದು, ದುರದೃಷ್ಟಕರ ಎಂದರು.
ಕೇವಲ ಕುಮಾರಸ್ವಾಮಿ ಅವರದ್ದು, ಮಾತ್ರವಲ್ಲ ಬಿಜೆಪಿಯ ಅನೇಕ ನಾಯಕರ ಮೇಲೂ ಪ್ರಕರಣಗಳಿವೆ. ಅವುಗಳನ್ನೆಲ್ಲ್ಲ ಪೆಂಡಿoಗ್ ಇಟ್ಟು ಮುಖ್ಯಮಂತ್ರಿಗಳ ಮೇಲೆ ಇದೀಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ಬಿಜೆಪಿ ಸರ್ಕಾರದ ಬೊಮ್ಮಾಯಿಯವರೆ ನಿವೇಶನ ನೀಡಿದ್ದು. ಅವರೇನು ಯಾವುದೇ ಹಣ ದುರುಪಯೋಗ ಮಾಡಿಕೊಂಡಿಲ್ಲ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆ ಅನ್ನೊದು ಸಾಬಿತಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.