October 5, 2026
Monday, October 5, 2026
spot_img

ರಾಜಕೀಯನೇ ಬೇರೆ, ಕೆಲಸನೇ ಬೇರೆ: ಕೃಷ್ಣಬೈರೇಗೌಡರ ಕಾರ್ಯವೈಖರಿಯನ್ನು ಶ್ಲಾಘಿಸಿದ ಎಚ್‌ಡಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಚಿವ ಕೃಷ್ಣ ಬೈರೇಗೌಡ ಅವರ ಕಾರ್ಯವೈಖರಿಯನ್ನು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ.

ಇಂದು ಬಿಡದಿ ಟೌನ್‌ಶಿಪ್‌ ವಿಚಾರದ ಬಗ್ಗೆ ಜೆಪಿ ಭವನದಲ್ಲಿ ಹೆಚ್‌ಡಿಡಿ ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೇಳಲಾದ ಪ್ರಶ್ನೆಗೆ, ರಾಜಕೀಯವೇ ಬೇರೆ, ಮಾಡುವ ಕೆಲಸವೇ ಬೇರೆ. ಕೃಷ್ಣ ಬೈರೇಗೌಡ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವಿಶೇಷವಾಗಿ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮತ್ತು ಅವರನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು. ಸಾಮಾನ್ಯವಾಗಿ ವಿಪಕ್ಷಗಳ ನಾಯಕರು ಒಳ್ಳೆ ಕೆಲಸ ಮಾಡಿದರೂ ಅದು ಯಾರ ಬಾಯಲ್ಲೂ ಬರೋದಿಲ್ಲ. ಆದರೆ ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದನ್ನು ಗುರುತಿಸಿ ಶ್ಲಾಘಿಸಿದ್ದು ವಿಶೇಷವಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Must Read