ಹೊಸದಿಗಂತ ವರದಿ,ಸೋಮವಾರಪೇಟೆ:
ರೈತರ ಪಂಪ್ ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡುವ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದಿರುವ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ರೈತ ಸಂಘದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ರೈತರು ಕೃಷಿಗಾಗಿ ಬಳಸುತ್ತಿರುವ 10 ಹೆಚ್.ಪಿ. ವರೆಗಿನ ಪಂಪ್ ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡುವಂತೆ ನೀವುಗಳು ಕೇಳದಿದ್ದರೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸದನದಲ್ಲಿ ನಾನೇ ಪ್ರಸ್ತಾಪ ಮಾಡಿದ್ದೇನೆ. ಮುಂಬರುವ ಬಜೆಟ್ ಸಂದರ್ಭ ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಇದೀಗ ಹೊಸ ಮುಖ್ಯಮಂತ್ರಿಗಳು ಬಂದಿದ್ದಾರೆ. ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು,ಹಾಸನ,ಚಿಕ್ಕಮಗಳೂರು ರೈತರ ಹಿತದೃಷ್ಟಿಯಿಂದ ನಾನು ಹಾಗೂ ಕೆ.ಜಿ.ಬೋಪಯ್ಯ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಕಡತ ಮಂಡಿಸುವಂತೆ ಸಂಬಂಧಿಸಿವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಹೀಗಿರುವಾಗ ಸುಮ್ಮನಾದರೂ ಧರಣಿ ಕೂರುವುದು ಎಷ್ಟು ಸರಿ. ಇದರಿಂದ ನಿಮ್ಮ ಹೋರಾಟದ ನೈಜತೆ ಎಷ್ಟು ಎಂದು ಅಪ್ಪಚ್ಚುರಂಜನ್ ಕಿಡಿಕಾರಿದರು.
ಧರಣಿಯ ಬಗ್ಗೆ ನನ್ನ ಗಮನಕ್ಕೂ ತಾರದೆ ಅನಾವಶ್ಯಕ ಹೇಳಿಕೆ ಎಷ್ಟು ಸರಿ ಎಂದ ಅವರು, ಈ ವಿಚಾರದಲ್ಲಿ ಅನಾವಶ್ಯಕ ರಾಜಕೀಯ ಮಾಡಬೇಡಿ.ರೈತರಲ್ಲಿ ಗೊಂದಲ ಮೂಡಿಸಬೇಡಿ ಎಂದು ಸಲಹೆ ಮಾಡಿದರು.