ಕರ್ನಾಟಕದ14 ಲೋಕಸಭಾ ಕ್ಷೇತ್ರಗಳಿಗೆ ಮತದಾನ: 3 ಗಂಟೆಯ ವೇಳೆಗೆ 54.20% ವೋಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ 54.20% ಮತದಾನ ನಡೆದಿದೆ.

ಮಧ್ಯಾಹ್ನ 1 ಗಂಟೆಯ ವೇಳೆ ರಾಜ್ಯದಲ್ಲಿ 41.59% ಮತದಾನ ನಡೆದಿತ್ತು. ನಂತರದ ಎರಡು ಗಂಟೆಯಲ್ಲಿ 12.61% ಮತದಾನ ದಾಖಲಾಗಿದೆ.

ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ (Chikkodi) ಅತಿ ಹೆಚ್ಚು 59.65% ಮತದಾನ ನಡೆದರೆ ಕಲಬುರಗಿಯಲ್ಲಿ (Kalaburagi) 47.67% ಮತದಾನ ನಡೆದಿದೆ.

2019ರ ಚುನಾವಣೆಯಲ್ಲಿ ಈ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ (BJP) ಗೆದ್ದುಕೊಂಡಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ (Congress) ಸರ್ಕಾರ ಅಧಿಕಾರದಲ್ಲಿರುವ ಕಾರಣ ಉತ್ತರ ಕರ್ನಾಟಕದ ಈ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರಾ ಪೈಪೋಟಿ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!