ಬಹುಪತ್ನಿತ್ವ ನಿಷೇಧ, ಲೀವ್ ಇನ್ ರಿಲೇಶನ್‌ಶಿಪ್ ಗೆ ರಿಜಿಸ್ಟ್ರೇಶನ್ ಕಡ್ಡಾಯ: ಸಿವಿಲ್ ಕೋಡ್ ಡ್ರಾಫ್ಟ್ ರೆಡಿ ಮಾಡಿದ ಉತ್ತರಾಖಂಡ್ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರಖಂಡದ ಬಿಜೆಪಿ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಸಜ್ಜಾಗಿದೆ. ಈಗಾಗಲೇ ಡ್ರಾಫ್ಟ್ ರೆಡಿ ಮಾಡಿದ್ದು, ವಿಶೇಷ ಅಧಿವೇಶನ ಕರೆದು ಮಂಡಿಸಲು ಸಜ್ಜಾಗಿದೆ.

ಏಕರೂಪ ನಾಗರೀಕ ಸಂಹಿತೆಯ ಕರಡು ಪಟ್ಟಿಯಲ್ಲಿ ಕೆಲ ಮಹತ್ವದ ನಿಯಮಗಳು ಭಾರಿ ಚರ್ಚೆಯಾಗುತ್ತಿದೆ.

ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ನೇತೃತ್ವದ ಸಮಿತಿ ರಚಿಸಿರು ಕರಡು ನೀತಿಯಲ್ಲಿ ಪ್ರಮುಖವಾಗಿ ಬಹುಪತ್ನಿತ್ವ ನಿಷೇಧಿಸಲಾಗಿದೆ. ಧರ್ಮದ ಆಧಾರದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ ಎಂದಿದೆ. ಇದರ ಜೊತೆಗೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಲೀವ್ ಇನ್ ರಿಲೇಶನ್‌ಶಿಪ್ ಹಾಗೂ ಅಪರಾಧ ಪ್ರಕರಣಗಳಿಗೆ ಕಡಿಣವಾಣ ಹಾಕಲು ಹೊಸ ನಿಯಮ ರೂಪಿಸಲಾಗಿದೆ. ಲೀವ್ ಇನ್ ರಿಲೇಶನ್‌ಶಿಪ್ ಆರಂಭಿಸಲು, ರಿಜಿಸ್ಟ್ರೇಶನ್ ಕಡ್ಡಾಯ ಮಾಡಲಾಗಿದೆ. ರಿಜಿಸ್ಟ್ರೇಶನ್ ಇಲ್ಲದ ರಿಲೇಶನ್‌ಶಿಪ್ ಮಾನ್ಯವಾಗಿರುವುದಿಲ್ಲ.

ಅದೇ ರೀತಿ ಯಾವುದೇ ಧರ್ಮದ ಗಂಡು ಅಥವಾ ಹೆಣ್ಣುಮಗುವಿಗೆ ಸಮಾನ ಹಕ್ಕು ನೀಡಲಾಗುತ್ತದೆ. ಇದರಿಂದ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಗುವಿಗೆ ಇರುವಷ್ಟೇ ಅವಕಾಶವನ್ನು ಹೆಣ್ಣುಮಗುವಿಗೂ ನೀಡಲಾಗುತ್ತಿದೆ. ಈ ನಿಯಮ ಧರ್ಮ, ಎಲ್ಲಾ ಮತ ಹಾಗೂ ಪಂಥಗಳಿಗೆ ಅನ್ವಯವಾಗಲಿದೆ. ಈ ಮೂಲಕ ಹಲವು ಹೊಸತನ, ಕಠಿಣ ನಿಯಮಗಳನ್ನೊಳಗೊಂಡ ಸಿವಿಲ್ ಕೋಡ್ ನೀತಿ ಜಾರಿಗೊಳಿಸಲು ತಯಾರಿಗಳು ಭರದಿಂದ ಸಾಗಿದೆ.

ಈ ವರ್ಷದ ಆರಂಭದಲ್ಲೇ ಏಕರೂಪ ನಾಗರೀಕ ಸಂಹಿತೆ ಡ್ರಾಫ್ಟ್ ತಯಾರಿಸಲು ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ವರದಿ ಆಧಾರದಲ್ಲಿ ಕರಡು ತಯಾರಿಸಲಾಗಿದೆ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!