ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಚಿತ್ರದ ಬಿಡುಗಡೆ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಈ ನಡುವೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವಿನ ಗಾಸಿಪ್ ಎಲ್ಲೆಡೆ ಹರಿದಾಡುತ್ತಿತ್ತು. ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂದು ಎಲ್ಲಾ ಕಡೆ ಸುದ್ದಿ ಕೇಳಿಬರುತ್ತಿತ್ತು.
ಈ ಗಾಸಿಪ್ ಬಗ್ಗೆ ಈಗ ಒಂದು ಹೇಳಿಕೆಯ ಮೂಲಕ ಅವರ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ, ಪ್ರಭಾಸ್ ಬಹಳ ಒಳ್ಳೆಯ ಮನುಷ್ಯ’ ಎಂದು ಹೊಗಳಿದ್ದಾರೆ. ನನಗೆ ಹಾಗೂ ತಾಯಿಗೆ ಪ್ರಭಾಸ್ ಮನೆಯಲ್ಲೇ ತಯಾರಿಸಿದ ತಿನಿಸುಗಳನ್ನು ತಂದುಕೊಡುತ್ತಿದ್ದರು ಎಂದು ಹೇಳಿದ್ದಾರೆ.
‘ರಾಧೆ ಶ್ಯಾಮ್’ ಮಾರ್ಚ್ 11ಕ್ಕೆ ತೆರೆಗೆ ಬರುತ್ತಿದೆ. 1970ರ ಕಾಲಘಟ್ಟದಲ್ಲಿ ನಡೆದ ಕಥೆ ಇದಾಗಿದೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಿದೆ. ಕನ್ನಡ ಅವತರಣಿಕೆಗೆ ಶಿವರಾಜ್ಕುಮಾರ್ ನಿರೂಪಿಸಿದ್ದಾರೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ನಿರೂಪಿಸುತ್ತಿದ್ದಾರೆ. ಉಳಿದ ಭಾಷೆಗಳಿಗೆ ರಾಜಮೌಳಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಧ್ವನಿ ನೀಡಿದ್ದಾರೆ.