Wednesday, June 7, 2023

Latest Posts

ಪೂಂಚ್ ದಾಳಿ ಪ್ರಕರಣ: ವಿಚಾರಣೆಗೆ ಹೆದರಿ ವಿಷ ಸೇವಿಸಿ ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಪೂಂಚ್ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ (Poonch terror attack case) ಸಂಬಂಧಿಸಿ ಪೊಲೀಸರು ವಿಚಾರಣೆಗೆ ಕರೆದಿದ್ದ 35 ವರ್ಷದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮುವಿನ ಜಿಲ್ಲೆಯ ಮೆಂಧರ್ ತಹಸಿಲ್‌ನ ನಾರ್ ಗ್ರಾಮದ ನಿವಾಸಿ ಮುಖ್ತಾರ್ ಹುಸೇನ್ ಷಾ ಅವರು ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಹಂತಕಗೊಂಡಿದ್ದಾರೆ. ಜತೆಗೆ ಅವರನ್ನು ಈ ಪ್ರಕರಣದಲ್ಲಿ ಶಂಕಿತ ಎಂದು ಕರೆದಿಲ್ಲ, ನಮಗೆ ಕೆಲವೊಂದು ಮಾಹಿತಿಗಳು ಬೇಕಿತ್ತು ಎಂದು ಹೇಳಿದ್ದಾರೆ.ಆದ್ರೆ ಮುಖ್ತಾರ್ ಹುಸೇನ್ ಮಂಗಳವಾರ ಸಂಜೆ ಮನೆಯಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಸ್ಥಳೀಯ ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಇಂದು (ಏ.27) ಬೆಳಿಗ್ಗೆ ನಿಧನರಾದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಮಾಡುವಂತೆ ಕೇಳಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಶಂಕಿತರು ನಡೆಸಿದ (ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ) ದಾಳಿಯ ಬಗ್ಗೆ ಹೆಚ್ಚಿನ ವರದಿ ನೀಡಲು ಅಧಿಕಾರಿಗಳು ದಾಳಿ ನಡೆದ ಸ್ಥಳದಲ್ಲಿರುವ ಹಳ್ಳಿಯ ನಿವಾಸಿಗಳನ್ನು ವಿಚಾರಣೆಗೆ ಕರೆಯಲಾಗಿತ್ತು. ಅದರಲ್ಲಿ ಮುಖ್ತಾರ್ ಹುಸೇನ್ ಷಾ ಕೂಡ ಒಬ್ಬರು ಎಂದು ಹೇಳಲಾಗಿತ್ತು. ಮುಖ್ತಾರ್ ಹುಸೇನ್ ಷಾ ಅವರಿಗೆ ಕೌಟುಂಬಿಕ ಸಮಸ್ಯೆಗಳು ಇತ್ತು ಮತ್ತು ಈ ವಿಚಾರವಾಗಿ ಅವರು ತುಂಬಾ ಗೊಂದಲಕ್ಕೊಳಗಾಗಿದ್ದಾರೆ ಎಂದು ಅಧಿಕಾರಿ ಹೇಳಿದರು.

ಭಟಾ ಧುರಿಯನ್‌ನಲ್ಲಿ ನಡೆದ ದಾಳಿಯ ನಂತರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 60 ಕ್ಕೂ ಹೆಚ್ಚು ಜನರನ್ನು ಬಂಧಿಸಿವೆ, ಈ ಪ್ರದೇಶದಲ್ಲಿರುವ ದಟ್ಟವಾದ ಅರಣ್ಯ ಪ್ರದೇಶ ಮತ್ತು ನೈಸರ್ಗಿಕ ಗುಹೆಗಳಿಂದಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಯೋತ್ಪಾದಕರ ಬಂದಿದ್ದಾರೆ ಎಂದು ಹೇಳಲಾಗಿದೆ. ಭದ್ರತಾ ಪಡೆಗಳ ಶೋಧ ಕಾರ್ಯಚರಣೆ ಎಂಟನೇ ದಿನ ಕಾಲಿಟ್ಟಿದೆ. ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಡ್ರೋನ್‌ಗಳು, ಸ್ನಿಫರ್ ಡಾಗ್‌ಗಳು ಮತ್ತು ಲೋಹ ಶೋಧಕಗಳನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!