‌ಸ್ಮಾರ್ಟ್‌ ಸಿಟಿ ಹೆಸರಲ್ಲಿ ಕಳಪೆ ಕಾಮಗಾರಿ: ಮಹಾತ್ಮಾಗಾಂಧಿ ಉದ್ಯಾನ ವೇದಿಕೆಯಿಂದ ಲೋಕಾಯುಕ್ತ ತನಿಖೆಗೆ ಮನವಿ

ಹೊಸದಿಗಂತ ವರದಿ ಹುಬ್ಬಳ್ಳಿ:
ಸ್ಮಾರ್ಟ್ ಸಿಟಿ ಯೋಜನೆಯಡಿ ೨೬.೧೧ ಕೋಟಿ ರೂ. ವೆಚ್ಚದಲ್ಲಿ ನಗರದ ಮಹಾತ್ಮ ಗಾಂಧೀಜಿ ಉದ್ಯಾನವನ ಪುನರ್ ಅಭಿವೃದ್ಧಿ ಪಡಿಸಲಾಗಿದ್ದು ಈ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಜಿಲ್ಲಾ ಲೋಕಾಯುಕ್ತರಿಗೆ ತನಿಖೆ ಮಾಡಲು ಮನವಿ ಸಲ್ಲಿಸಲಾಗಿದೆ ಎಂದು ಮಹಾತ್ಮ ಗಾಂಧೀಜಿ ಉದ್ಯಾನವನ ವೇದಿಕೆಯ ಪ್ರಧಾನ ಸಂಚಾಲ ಬಸವರಾಜ ತೇರದಾಳ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕಳೆಪೆ ಕಾಮಗಾರಿಯ ಕುರಿತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಉದ್ಯಾನವನ ಪೂರ್ವದಲ್ಲಿರುವ ಗೋಡೆಯನ್ನು ನಿರ್ಮಾಣ ಮಾಡುದ್ದು, ಕೇವಲ ೪.೨೦ ಮೀಟರ್ ಇದೆ. ಆದರೆ ಅಧಿಕಾರಿಗಳು ನೀಡಿರುವ ದಾಖಲೆ ಪ್ರಕಾರ ೭.೫೦ ಮೀಟರ್ ಇದೆ ಈ ಕುರಿತು ತನಿಖೆ ನಡೆಸಬೇಕು. ರೇವಣಸಿದ್ದಪ್ಪ ಹುಬ್ಬಳ್ಳಿ, ಮಹಾತ್ಮ ಗಾಂಧಿ ಉದ್ಯಾವನದ ಅಭಿವೃದ್ಧಿ ಹೆಸರಲ್ಲಿ ದುಡ್ಡು ಹೊಡೆಯಲಾಗಿದೆ. ಪುಟಾಣಿ ರೈಲು ಕಾಮಗಾರಿ ಕಳಪೆಯಾಗಿರುವುದು ಉದ್ಘಾಟನೆ ಸಮಯದಲ್ಲಿ ಕಂಡು ಬಂದಿದೆ. ಅದೇ ರೀತಿ ಉದ್ಯಾನವನದಲ್ಲಿ ಕಲಾಕೃತಿಗಳಿಗೆ ಬಣ್ಣದ ಲೇಪನ ಮಾಡಲಾಗಿದೆ ಹೊರತು ಪುರನ್ ನಿರ್ಮಿಸಿಲ್ಲ. ಉದ್ಯಾನವದ ಹತ್ತಿರ ವಿರುವ ಫಜಲ್ ಪಾರ್ಕಿಂಗ್ ನಿರ್ಮಾಣವಾದರೂ ಇಲ್ಲಿವರೆಗೂ ಬಳಕೆ ಯಾಗುತ್ತಿಲ್ಲ.‌ ಸಂಪೂರ್ಣ ಕಾಮಗಾರಿ ಕಳೆಪೆಯಾಗಿದೆ ಎಂದು ಆರೋಪಿಸಿದರು

ವೇದಿಕೆ ಸಂಚಾಲಕ ಮೋಹನ‌ ಹಿರಮನಿ, ಬೆಂಗಳೂರು ಹೊರತು ಪಡಿಸಿ ಹುಬ್ಬಳ್ಳಿ ಉತ್ತಮ‌ ನಗರವಾಗಿದೆ. ಆದರೆ ಇಲ್ಲಿ ಅಭಿವೃದ್ಧಿ ಹೆಸರಲ್ಲಿ ಕೋಟೆಗಟ್ಟಲ್ಲೆ ಹಣ ತಿನ್ನಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಿಕ್ಷಪಕ್ಷಪಾತವಾಗಿ ತನಿಖೆ ನಡೆಬೇಕು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಲಕ್ಷ್ಮಣ ಗಂಡಗಾಳಕರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!