ಭಾರೀ ಮಳೆಗೆ ಕುಸಿದ ಸ್ನಾನದ‌ ಮನೆಯ ಗೋಡೆ: ವೃದ್ಧೆ ಗಂಭೀರ

ಹೊಸದಿಗಂತ ವರದಿ, ಮಡಿಕೇರಿ:
ಭಾರೀ ಮಳೆಗೆ ಸ್ನಾನದ ಮನೆಯ ಗೋಡೆ ಬಿದ್ದು ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಶನಿವಾರಸಂತೆಯಲ್ಲಿ ನಡೆದಿದೆ.
ಶನಿವಾರಸಂತೆ ಹೋಬಳಿ ಸುಳುಗಳಲೆ ಗ್ರಾಮದ ನಿವಾಸಿ ದಕ್ಷಿಣಾಮೂರ್ತಿ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ವಸಂತಮ್ಮ (70) ಎಂಬವರನ್ನು ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಮಂಗಖವಾರ ಬೆಳಗ್ಗೆ ವಸಂತಮ್ಮ ಅವರು ಎಂದಿನಂತೆ ತಮ್ಮ ಮನೆಗೆ ಹೊಂದಿಕೊಂಡಿರುವ ಸ್ನಾನದ ಮನೆಗೆ ತೆರಳಿದ್ದು, ಈ ಸಂದರ್ಭ ಗೋಡೆ ಕುಸಿದು ಅವರ ಎರಡು ಕಾಲುಗಳು, ಮುಖ ಹಾಗೂ ಕಣ್ಣಿಗೆ ತೀವ್ರ ಪೆಟ್ಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!