ಆನ್ ಲೈನ್ ಪಾಠ ಮಾಡುತ್ತಿದ್ದ ವೇಳೆ ಪ್ರಸಾರವಾಯಿತು ಅಶ್ಲೀಲ ವಿಡಿಯೋ!

ಹೊಸದಿಗಂತ ವರದಿ, ಮೈಸೂರು:

ಗೂಗಲ್ ಮೀಟ್ ಮೂಲಕ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುತ್ತಿದ್ದ ವೇಳೆ ಯುವಕನೊಬ್ಬನ ಐಡಿಯಿಂದ ಅಶ್ಲೀಲ ವಿಡಿಯೋವನ್ನು ದುಷ್ಕರ್ಮಿಗಳು ಪ್ರಸಾರ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಸಂಬAಧ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆನ್‌ಲೈನ್ ಮೂಲಕ ಗೂಗಲ್ ಮೀಟ್‌ನಲ್ಲಿ ತರಗತಿ ನಡೆಯುತ್ತಿರುವ ವೇಳೆ ಲಿಂಕ್ ಮೂಲಕ ತರಗತಿಗೆ ಸೇರಿಕೊಂಡ ಅಪರಿಚಿತನೊಬ್ಬ, ಎಲ್ಲಾ ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ.
ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಅಶ್ಲೀಲ ದೃಶ್ಯ ಪ್ರಸಾರವಾಗುತ್ತಿದ್ದನ್ನು ಕಂಡು ಮುಜುಗರಕ್ಕೆ ಒಳಗಾಗಿದ್ದಾರೆ. ಅಲ್ಲದೇ ಇದನ್ನು ಕಂಡ ಶಿಕ್ಷಕಿ ಗಾಬರಿಯಾಗಿದ್ದು, ಕೂಡಲೇ ಕಾಲೇಜಿನ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ.
ಬಳಿಕ ಕಾಲೇಜು ಆಡಳಿತ ಮಂಡಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆನ್‌ಲೈನ್ ಪಾಠದ ಲಿಂಕ್ ನ್ನು ಯಾವ ವಿದ್ಯಾರ್ಥಿ ಬೇರೆಯವರಿಗೆ ಶೇರ್ ಮಾಡಿದ್ದಾರೆ, ಮತ್ತು ಯಾವ ನಂಬರ್‌ನಿoದ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಗೂಗಲ್ ಕಂಪನಿಗೆ ವಿವರ ಕೋರಿ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಮಾಡುವುದಾಗಿ ಸೈಬರ್ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!