ಪೋರ್ನ್‌ ವಿಡಿಯೋ ದಂಧೆ ಪ್ರಕರಣ: ನಟಿ ಶೆರ್ಲಿನ್​ ಚೋಪ್ರಾಗೆ ರಕ್ಷಣೆ ನೀಡಿದ ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ಪೋರ್ನ್‌ ವಿಡಿಯೋ ದಂಧೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಮತ್ತು ರೂಪದರ್ಶಿ ಶೆರ್ಲಿನ್​ ಚೋಪ್ರಾಗೆ ಬಂಧನದಿಂದ ಸುಪ್ರೀಂಕೋರ್ಟ್​ ರಕ್ಷಣೆ ನೀಡಿದೆ.
ಶೆರ್ಲಿನ್​ ಚೋಪ್ರಾಗೆ ಬಾಂಬೆ ಹೈಕೋರ್ಟ್​​ ನಟಿಗೆ ನಿರೀಕ್ಷಣಾ ಜಾಮೀನು ತಿರಸ್ಕಾರ ಮಾಡಿದ್ದ ಆದೇಶ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿನೀತ್​ ಸರಣ್ ಮತ್ತು ಅನಿರುದ್ಧ ಬೋಸ್​ ಅವರಿದ್ದ ಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.
ಈ ಹಿಂದೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮತ್ತು ನಟಿ ಪೂನಂ ಪಾಂಡೆಗೆ ರಕ್ಷಣೆ ನೀಡುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿತ್ತು. ಇದೀಗ ಚೋಪ್ರಾಗೆ ರಕ್ಷಣೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!