Wednesday, December 6, 2023

Latest Posts

ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ಚಳಿಗಾಲದಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಗಂಜಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರೆಶರ್ ಕುಕ್ಕರ್‌ಗಳ ಆಗಮನದಿಂದ ಗಂಜಿ ಪದದ ಪರಿಚಯವಿರುವವರು ಕಡಿಮೆಯಿದ್ದಾರೆ. ಈಗಿನ ಪೀಳಿಗೆಗಂತೂ ರವೆ ಗಂಜಿ ಬಿಟ್ಟರೆ ಅನ್ನದ ಗಂಜಿ ಬಗ್ಗೆ ಕಿಂಚಿತ್ತೂ ತಿಳಿದಿಲ್ಲ ಅನಿಸುತ್ತೆ. ಹಿಂದಿನ ಕಾಲದಲ್ಲಿ ಅನ್ನ ಬೇಯಿಸುವಾಗ ಗಂಜಿ ಮಾಡುವ ಸಂಪ್ರದಾಯವಿತ್ತು. ಗಂಜಿಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುತ್ತಿದ್ದರು. ಇದನ್ನು ಸೇವಿಸಿದರೆ ಬೆಳಿಗ್ಗೆ ಉಪಾಹಾರದ ಅಗತ್ಯವೇ ಇರುತ್ತಿರಲಿಲ್ಲ.

ಗಂಜಿ ಕುಡಿಯುವುದರಿಂದಾಗುವ ಪ್ರಯೋಜನಗಳು

ಚಳಿಗಾಲದಲ್ಲಿ ಗಂಜಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ದೇಹವು ಬೆಚ್ಚಗಿರುತ್ತದೆ. ಚಳಿಗಾಲವೆಂದರೆ ಜ್ವರದ ಕಾಲ, ಜ್ವರದಿಂದ ದೇಹದಲ್ಲಿ ಶಕ್ತಿ ಕುಂದುತ್ತದೆ. ಗಂಜಿ ಕುಡಿಯುವುದರಿಂದ ದೇಹವು ಬೆಚ್ಚಗಿಡುತ್ತದೆ ಹಾಗೆಯೇ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಚಳಿಗಾಲದಲ್ಲಿ ತಂಪಾದ ಗಾಳಿಯು ಚರ್ಮದಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಗಂಜಿ ಕುಡಿದರೆ ಚರ್ಮ ಒಡೆಯುವುದಿಲ್ಲ.

ಬೆಳಗಿನ ಉಪಾಹಾರದ ಬದಲು ಗಂಜಿ ಸೇವಿಸುವುದರಿಂದ ಹೊಟ್ಟೆ ತುಂಬಿರುವುದಲ್ಲದೆ ದೇಹ ತಂಪಾಗುತ್ತದೆ. ಗಂಜಿಯಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಎದೆಯುರಿಯಿಂದ ಬಳಲುತ್ತಿರುವವರಿಗೆ ಗಂಜಿ ತುಂಬಾ ಒಳ್ಳೆಯದು. ಗಂಜಿ ಅತಿಸಾರವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಹೊಟ್ಟೆಯ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಗಂಜಿಯಲ್ಲಿರುವ ಇನೋಸಿಟಾಲ್ ಎಂಬ ಕಾರ್ಬೋಹೈಡ್ರೇಟ್ ಕೂದಲು ಉದುರುವುದನ್ನು ತಡೆಯುತ್ತದೆ. ಗಂಜಿ ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದ್ದು, ಇವು ಸ್ನಾಯುಗಳ ಬೆಳವಣಿಗೆಗೆ ಉಪಯುಕ್ತವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!