Monday, November 28, 2022

Latest Posts

ರಾತ್ರೋರಾತ್ರಿ ಹೊಸ ತಿರುವು ಪಡೆದ ಬಸ್‌ ಶೆಲ್ಟರ್:‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಸೂರು-ಊಟಿ ರಸ್ತೆಯಲ್ಲಿರುವ ಗುಂಬಜ್‌ ಮಾದರಿಯ ಬಸ್‌ ಶೆಲ್ಟರ್‌ ಸಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಳೆದೆರಡು ದಿನಗಳ ಹಿಂದಷ್ಟೇ ಕಳಸ ನಿರ್ಮಾಣದ ಬೆನ್ನಲ್ಲೇ ಇದೀಗ ನಾಮಫಲಕ ಬಿಜೆಪಿ ನಾಯಕರ ಫೋಟೋ ಕೂಡ ಅಳವಡಿಸಲಾಗಿದೆ. ಬೆಳಗಾಗುವುದರೊಳಗೆ ಬಸ್‌ ನಿಲ್ದಾಣದಕ್ಕೆ ಜೆಎಸ್‌ಎಸ್‌ ಕಾಲೇಜು ಬಸ್‌ ನಿಲ್ದಾಣ ಎಂದು ನಾಮಕರಣ ಮಾಡಲಾಗಿದ್ದು, ಜೊತೆಗೆ ಎರಡೂ ಬದಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಬಸವರಾಜ್‌ ಬೊಮ್ಮಾಯಿ, ಸುತ್ತೂರು ಮಠದ ಮೂಲ ಮಠಾಧಿಪತಿಗಳಾಗಿದ್ದ ಶ್ರೀ ರಾಜೇಂದ್ರ ಶಿವಯೋಗಿ ಮತ್ತು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಫೋಟೋಗಳು ಇವೆ.

ಮಸೀದಿ ಮಾದರಿಯಲ್ಲಿರುವ ಶೆಲ್ಟರ್‌ ತೆಗೆಯುವಂತೆ ಸಂಸದ ಪ್ರತಾಪ್‌ ಸಿಂಹ ತಾಕೀತು ಮಾಡಿದ್ದರು. ಇಲ್ಲದಿದ್ದರೇ ತಾನೇ ಜೆಸಿಬಿ ಮೂಲಕ ಕೆಡವಿಸುವುದಾಗಿ ಎಚ್ಚರಿಕೆ ಕೂಡಾ ನೀಡಿದ್ದರು ಇದರ ಬೆನ್ನಲ್ಲೇ ರಾತ್ರೋರಾತ್ರಿ ಇಂತಹ ಬದಲಾವಣೆಯಾಗಿದೆ. ಅಲ್ಲದೆ ನಿರ್ಮಾಣದ ಸ್ವರೂಪವನ್ನು ಶಾಸಕ ಎಸ್.ಎ.ರಾಮದಾಸ್ ಸಮರ್ಥಿಸಿಕೊಂಡಿದ್ದರು. ಗುಂಬಜ್‌, ಕಳಸ, ಶ್ರೀಗಳು, ಸಿಎಂ, ಪ್ರಧಾನಿಯವರ ಭಾವಚಿತ್ರ ಎಲ್ಲರದರ ನಡುವೆ ಈ ಸಮಸ್ಯೆಯನ್ನು ಮೈಸೂರು ಪಾಲಿಕೆ ಹೇಗೆ ಬಗೆಹರಿಸುತ್ತದೆ ಎಂದು ಕಾದುನೋಡಬೇಕಿದೆ.

ಈ ಎಲ್ಲದರ ನಡುವೆ ಮೈಸೂರು ಪಾಲಿಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೊಟೀಸ್ ನೀಡಿದೆ. ಅನಧಿಕೃತವಾಗಿ ಬಸ್ ನಿಲ್ದಾಣ ನಿರ್ಮಿಸಲಾಗುದ್ದು, ಒಂದು ವಾರದೊಳಗೆ ಬಸ್‌ ನಿಲ್ದಾಣ ತೆರವುಗೊಳಿಸುವಂತೆ ನೊಟೀಸ್‌ನಲ್ಲಿ ಉಲ್ಲೇಖಿಸಿದೆ. ರಾಷ್ಟ್ರೀಯ ಹೆದ್ದಾರಿ ಬಲ ಭಾಗದಲ್ಲಿ ಶೆಲ್ಟರ್‌ ನಿರ್ಮಿಸಲಾಗಿದೆ ಈ ಹಿಂದೆಯೇ ಈ ಜಾಗದಲ್ಲಿ ಶೆಲ್ಟರ್‌ ನಿರ್ಮಿಸದಂತೆ ಸೂಚಿಸಲಾಗಿತ್ತು. ಆದರೂ ಅನಧಿಕೃತವಾಗಿ ನಿರ್ಮಿಸಿದ ಶೆಲ್ಟರ್‌ ತೊಲಗಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಒಂದು ವಾರಗಳ ಕಾಲ ಗಡುವು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!