September 24, 2026
Thursday, September 24, 2026
spot_img

ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ- ಈವರೆಗೆ 2 ಕೋಟಿ 12 ಲಕ್ಷ ಪಾಸ್ ಪೋರ್ಟ್ ವಿತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಆರಂಭವಾದಾಗಿನಿಂದ ಈವರೆಗೆ 2 ಕೋಟಿ 12 ಲಕ್ಷ ಪಾಸ್ ಪೋರ್ಟ್ ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ದೆಹಲಿಯಲ್ಲಿಂದು ನೆಹರೂ ಪ್ಲೇಸ್ ನ ಅಂಚೆ ಕಚೇರಿಯ ನವೀಕೃತ ಕಟ್ಟಡವನ್ನು ಉದ್ಘಾಟಿಸಿ ಅವರು, ಭಾರತೀಯ ಅಂಚೆ ಮೂಲಕ ಪ್ರತಿವರ್ಷ 7 ಕೋಟಿ 50 ಲಕ್ಷ ಪಾರ್ಸೆಲ್ ಗಳು ಮತ್ತು 90 ಕೋಟಿ ಅಂಚೆಗಳನ್ನು ತಲುಪಿಸಲಾಗುತ್ತಿದೆ.


ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗೆ 13 ಕೋಟಿ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ನಲ್ಲಿ 23 ಲಕ್ಷ ಕೋಟಿ ರೂಪಾಯಿ ಠೇವಣಿಯಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !