ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೊ ಅಂಟಿಸಿದ್ದು ತಪ್ಪಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಭಾರತದ ಪಾರ್ಟಿಯೋ ? ಪಾಕಿಸ್ತಾನದ ಪಾರ್ಟಿಯೋ ? ನಮ್ಮ ಯುವ ಮೋರ್ಚಾ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾವರ್ಕರ್ ಬಗ್ಗೆ ಚಿಲ್ಲರೆಯಾಗಿ ಮಾತನಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿದೆ ಎಂದು ಟೀಕಿಸಿದರು.
ಸಾವರ್ಕರ್ ಫೋಟೊವನ್ನು ಸೋನಿಯಾ ಗಾಂಧಿ, ಆ ಗಾಂಧಿ, ಈ ಗಾಂಧಿ ಮಧ್ಯೆ ಹಾಕಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.