October 15, 2026
Thursday, October 15, 2026
spot_img

ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ! ಕಬ್ಬನ್‌ಪಾರ್ಕ್‌ ನಿಲ್ದಾಣದಲ್ಲಿ ಮೆಟ್ರೋ ನಿಲ್ಲೋದಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್‌ ಪಾರ್ಟ್‌ ನಿಲ್ದಾಣದಲ್ಲಿ ಇಂದು ಮೆಟ್ರೋ ರೈಲು ನಿಂತಿಲ್ಲ. ಈ ದಿನದಂದು ತಾತ್ಕಾಲಿಕವಾಗಿ ಮೆಟ್ರೋ ಸ್ಟೇಷನ್‌ ಬಂದ್‌ ಮಾಡಲಾಗಿದೆ.

ಬಿಎಂಆರ್‌ಸಿಎಲ್‌ ಈ ಬಗ್ಗೆ ಮಾಹಿತಿ ನೀಡಿದ್ದು, ವಿದ್ಯುತ್‌ ವ್ಯತ್ಯಯದಿಂದಾಗಿ ಈ ಸಮಸ್ಯೆ ಎದುರಾಗಿದೆ. ಸದ್ಯಕ್ಕೆ ಸಮಸ್ಯೆ ತೀರುವವರೆಗೂ ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ರೈಲುಗಳು ನಿಲ್ಲೋದಿಲ್ಲ ಎಂದು ಹೇಳಿದೆ.

ಜನರು ಇದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ವಿದ್ಯುತ್‌ ಪೂರೈಕೆ ಸರಿಯಾದ ನಂತರ ಕಬ್ಬನ್‌ ಪಾರ್ಟ್‌ ನಿಲ್ದಾಣದಲ್ಲಿ ಕಾರ್ಯಾಚರಣೆ ಪುನಃ ಆರಂಭವಾಗಲಿದೆ ಎಂದು ಹೇಳಿದ್ದಾರೆ.

Must Read