`ಶಿವಶಕ್ತಿ’ ಸ್ಥಳದ ಸುತ್ತ ಸುತ್ತಿದ ರೋವರ್, ಇಸ್ರೋದಿಂದ ವಿಡಿಯೋ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ-3 ಯಶಸ್ವಿಯಾದಾಗಿನಿಂದ ಇಸ್ರೋ ವಿಸ್ಮಯಕಾರಿ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದೆ. ನಿನ್ನೆಯೂ ಚಂದ್ರನ ಮೇಲಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಸುತ್ತುತ್ತಿರುವುದು ಕಂಡು ಬಂತು.

ಇಸ್ರೋ ಈ ಕುರಿತು ಟ್ವೀಟ್ ಮಾಡಿದ್ದು, “ಪ್ರಗ್ಯಾನ್ ರೋವರ್ ಶಿವಶಕ್ತಿ ಪಾಯಿಂಟ್ ಸುತ್ತಲೂ ಚಲಿಸುತ್ತಿದೆ. ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಅನ್ವೇಷಿಸುತ್ತದೆ” ಎಂದು ಬರೆಯಲಾಗಿದೆ.

ಇಸ್ರೋ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆ ಮಾಡುವುದರೊಂದಿಗೆ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೂ ಭಾರತವೇ.

ಲ್ಯಾಂಡರ್ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಹೆಸರಿಸುವಂತೆ ಪ್ರಧಾನಿ ಮೋದಿ ಸೂಚಿಸಿದ ಬೆನ್ನಲ್ಲೇ ಇಸ್ರೋ ಈ ಪರವಾಗಿ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ತಿರಂಗ ಎಂದು ಹೆಸರಿಸೋಣ ಎಂದು ಮೋದಿ ಹೇಳಿದರು. ಚಂದ್ರನನ್ನು ಸುತ್ತುವ ಪ್ರಗ್ಯಾನ್ ರೋವರ್ ಮೂಲಕ ಸಂಶೋಧನೆ ನಡೆಸುತ್ತಿದೆ. ರೋವರ್ ಕಳುಹಿಸುತ್ತಿರುವ ಫೋಟೋ, ವಿಡಿಯೋಗಳನ್ನು ಇಸ್ರೋ ಪೋಸ್ಟ್ ಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!