Sunday, October 1, 2023

Latest Posts

ದಿನಭವಿಷ್ಯ| ನಿಮ್ಮ ಕಾರ್ಯಗಳು ಸರಿಯಾಗಿ ನಡೆಯಲು ನೀವು ಹೆಚ್ಚಿನ ಗಮನ ಕೊಡಿ..

 ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಉತ್ಸಾಹಪೂರ್ಣ ದಿನ. ಪ್ರಯಾಣ ಹೊರಡುವುದಾದಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡೇ ಹೊರಡಿ. ಇಲ್ಲವಾದರೆ ಸಂಕಷ್ಟ ಎದುರಿಸುವಿರಿ.

ವೃಷಭ
ಬಾಕಿ ಉಳಿದಿರುವ ಕಾರ್ಯ ಪೂರೈಸಲು ಸೂಕ್ತ ದಿನ. ಪ್ರೀತಿಯ ಅಹವಾಲು ಸಫಲತೆ ಕಾಣುವುದು. ಆರೋಗ್ಯ ಸಂಬಂಧಿ ಚಿಂತೆ ನಿವಾರಣೆ.

ಮಿಥುನ
ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಹೆಚ್ಚು ತಾಳ್ಮೆ ವಹಿಸಲು ಕಲಿಯಿರಿ. ಶಾಪಿಂಗ್ ಹೊರಟಲ್ಲಿ ನಿರೀಕ್ಷೆಗಿಂತ ಹೆಚ್ಚು ಖರ್ಚು ಸಂಭವಿಸಲಿದೆ.

ಕಟಕ
ಆರ್ಥಿಕವಾಗಿ ಸಮಾಧಾನ ತರುವಂತ ದಿನ. ಬೇಡಿಕೆಗಳು ಈಡೇರುವವು. ಮಾತಿನ ಜಾಣ್ಮೆಯಿಂದ ಇತರರನ್ನು ನಿಮ್ಮ ಕಡೆಗೆ ಒಲಿಸಿಕೊಳ್ಳುವಿರಿ.

ಸಿಂಹ
ಎಂದಿಗಿಂತ ಹೆಚ್ಚು ಕೆಲಸದ ಒತ್ತಡ. ಕೆಲಸದಲ್ಲಿ ಏಕಾಗ್ರತೆ ಕಳೆದುಕೊಳ್ಳಬೇಡಿ. ಆತ್ಮೀಯ ಸಂಬಂಧದಲ್ಲಿ ಬಿರುಕು ಮೂಡೀತು. ಸಹನೆ ಮುಖ್ಯ.

ಕನ್ಯಾ
ನಿಮ್ಮ ಉದ್ದೇಶ ಸಾಧಿಸಲು ಸಫಲ. ಆರ್ಥಿಕ ಪರಿಸ್ಥಿತಿ ಉತ್ತಮ. ಆರೋಗ್ಯದಲ್ಲಿ ಸುಧಾರಣೆ. ಕೌಟುಂಬಿಕ ವಾತಾವರಣ ನೆಮ್ಮದಿದಾಯಕ.

ತುಲಾ
ಕೌಟುಂಬಿಕ ಪರಿಸರದಲ್ಲಿ  ನೆಮ್ಮದಿ ಕಾಣುವಿರಿ. ಬಂಧುಗಳ ಜತೆ ಕಾಲಕ್ಷೇಪ. ಅಜೀರ್ಣದಂತಹ ಸಮಸ್ಯೆ ಉಂಟಾದೀತು. ಖರ್ಚು ಅಧಿಕ.

ವೃಶ್ಚಿಕ
ಮನದಲ್ಲಿ ಮೂಡಿದ್ದ ಗೊಂದಲಗಳು ಇಂದು ನಿವಾರಣೆ ಆಗುವವು. ಸ್ಪಷ್ಟ ಪಥ ಗೋಚರಿಸುವುದು. ಆತ್ಮೀಯರಿಂದ ಬೆಂಬಲ, ಸಾಂತ್ವನ ಲಭ್ಯ.

ಧನು
ನಿಮ್ಮ ಕಾರ್ಯಗಳು ಸರಿಯಾಗಿ ನಡೆಯಲು ನೀವು ಹೆಚ್ಚಿನ ಗಮನ ಕೊಡಿ. ಕೆಲವರು ನಿಮ್ಮ ಕಾರ್ಯಕ್ಕೆ ಅಡ್ಡಿ ಒಡ್ಡಲು ಯತ್ನಿಸುವರು. ಬಂಧುಗಳ ಅಸಹನೆ.

ಮಕರ
ಮಾತಿನ ಮೇಲೆ ಹೆಚ್ಚು ಎಚ್ಚರ ವಹಿಸಿ. ತಪ್ಪರ್ಥ ಮೂಡದಂತೆ ನೋಡಿಕೊಳ್ಳಿ.  ಆತ್ಮೀಯರ ಜತೆ ಭಿನ್ನಾಭಿಪ್ರಾಯ ಉಂಟಾದೀತು.

ಕುಂಭ
ಹೊಂದಾಣಿಕೆಯ ಮನೋಭಾವ ಬೆಳೆಸಿಕೊಳ್ಳಿ. ಜಿಗುಟು ನಿಲುವು ನಿಮಗೆ ಒಳಿತು ತಾರದು. ಇತರರ ಮಾತಿಗೂ ಮನ್ನಣೆ ಕೊಡುವುದು ಒಳಿತು.

ಮೀನ
ಆರ್ಥಿಕವಾಗಿ ನಿಮಗೆ ಪೂರಕ ದಿನ. ಉಳಿತಾಯ ಹೆಚ್ಚಳ. ವೃತ್ತಿಯಲ್ಲಿ ಪ್ರಗತಿ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ ಪಡೆಯುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!