ಪ್ರಜ್ವಲ್ ರೇವಣ್ಣ ಕೇಸ್: ಅಜ್ಞಾತ ಸ್ಥಳದಿಂದ 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ದೇವರಾಜೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮೊನ್ನೆಯಷ್ಟೇ ಸುದ್ದಿಗೋಷ್ಠಿ ಮಾಡಿ ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಕೀಲ ದೇವರಾಜೇಗೌಡ (Devarajegowda) ಇದೀಗ ಅಜ್ಞಾತ ಸ್ಥಳದಿಂದ 3 ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ.

ಶಿವರಾಮೇಗೌಡ ಜೊತೆ ಮಾತನಾಡಿದ ಎರಡು ಆಡಿಯೋ ತುಣುಕು ಹಾಗೂ ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜೊತೆ ಮಾತಾಡಿದ ಒಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಶಿವರಾಮೇಗೌಡ ಜೊತೆ ಡಿಕೆ ಶಿವಕುಮಾರ್​ ವಿಚಾರ ಮಾತಾಡುವ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಎಸ್‌ಐಟಿ ವಿಚಾರಣೆಯಲ್ಲಿ ಡಿಕೆ ಶಿವಕುಮಾರ್​ ಹೆಸರೇಳದಂತೆ ಶಿವರಾಮೇಗೌಡ ಸೂಚಿದ್ದಾರೆ.

ಮೂರು ಆಡಿಯೋ ಕ್ಲಿಪ್​ಗಳನ್ನು ಬಿಡುಗಡೆ ಮಾಡಿರುವ ದೇವರಾಜೇಗೌಡ, ಅಜ್ಞಾತ ಸ್ಥಳದಿಂದ ವಿಡಿಯೋ ಸಹ ರಿಲೀಸ್ ಮಾಡಿದ್ದಾರೆ. ಎಲ್ಲೂ ಕಾಣೆ ಆಗಿಲ್ಲ, 3 ದಿನ ರಜೆ ಇದ್ದಿದ್ದರಿಂದ ದೇಗುಲಕ್ಕೆ ಹೋಗುತ್ತಿದ್ದೇನೆ. ಕಾಣೆಯಾಗುವ ಪರಿಸ್ಥಿತಿ ಬಂದಿಲ್ಲ. ಕುಟುಂಬ ಸಮೇತ ದೇಗುಲಕ್ಕೆ ಬಂದಿರುವೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ದೇವರಾಜೇಗೌಡ, ಈ ಪ್ರಕರಣದ ಸೂತ್ರಧಾರಿ ಡಿಸಿಎಂ ಡಿಕೆ ಶಿವಕುಮಾರ್ ಎಂದು ನೇರವಾಗಿ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈ ವಿಚಾರವಾಗಿ ಬಹಿರಂಗ ಚರ್ಚೆಗೂ ಡಿಕೆ ಶಿವಕುಮಾರ್​ನ್ನು ಆಹ್ವಾನಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!