ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮೇ 31ಕ್ಕೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮೇ 31ಕ್ಕೆ ಮುಂದೂಡಿದೆ.

ಪ್ರಜ್ವಲ ಸಲ್ಲಿಸಿರುವ ಅರ್ಜಿಯನ್ನು ವಿಚಾರ ನಡೆಸಿದ ನ್ಯಾಯಾಲಯವು ಇದೀಗ ಮೇ 31ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ ಈ ವೇಳೆ ನ್ಯಾಯಾಲಯ ಎಸ್‌ಐಟಿಗೆ ನೊಟೀಸ್ ಜಾರಿಗೊಳಿಸಿದೆ.

ಮೂರು ಪ್ರಕರಣಗಳಲ್ಲಿ ನಿರೀಕ್ಷಣ ಜಾಮೀನುಗೆ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಠಾಣೆ ಕ್ರೈಂ ನಂಬರ್ 20/2024 ಸೈಬರ್ ಕ್ರೈಂ ಠಾಣೆ ಕ್ರೈಂ ನಂಬರ್ 2/ 2024 ಹಾಗೂ ಹೊಳೆನರಸೀಪುರ ಠಾಣೆ ಕ್ರೈಂ ನಂಬರ್ 107/ 2024 ಸೇರಿದಂತೆ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!