Wednesday, February 8, 2023

Latest Posts

ʻಪ್ರೌಡ್‌ ಆಫ್‌ ಯು ದೀಪಿಕಾ:’ಬೇಷರಂ’ ವಿರೋಧಿಗಳು ಫಿಫಾವನ್ನೂ ಬ್ಯಾನ್ ಮಾಡ್ತಾರಾʼ??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಪಠಾಣ್’ ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಅಭಿನಯದ ಸ್ಪೈ ಆಕ್ಷನ್ ಥ್ರಿಲ್ಲರ್. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜನವರಿ 25 ರಂದು ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಭಾರೀ ಹಿನ್ನೆಡೆ ಉಂಟಾಗುತ್ತಿದೆ.

ಬಿಡುಗಡೆಯಾದ ‘ಬೇಷರಂ ರಂಗ್’ ಹಾಡು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಚಲನಚಿತ್ರ ಮತ್ತು ರಾಜಕೀಯ ಗಣ್ಯರಿಂದ ಹಿಡಿದು ಸಾರ್ವಜನಿಕರವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ಬಗ್ಗೆ ವಿವಾದ ಎದ್ದಿದೆ. ಈ ವಿವಾದಕ್ಕೆ ನಟ ಪ್ರಕಾಶ್ ರಾಜ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ದೀಪಿಕಾ ಪರ ಬ್ಯಾಟ್‌ ಬೀಸಿದ್ದಾರೆ.

ನಿನ್ನೆ ನಡೆದ ಫುಟ್ಬಾಲ್ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ನಾಯಕಿ ದೀಪಿಕಾ ಪಡುಕೋಣೆಗೆ ಅಪರೂಪದ ಗೌರವ ಲಭಿಸಿದೆ. ಫಿಫಾ ವಿಶ್ವಕಪ್ ಅನ್ನು ಉದ್ಘಾಟನೆ ಮಾಡುವ ಅವಕಾಶ ಪಡೆದ ದೀಪಿಕಾ.. ಭಾರತದಿಂದ ಈ ಗೌರವ ಪಡೆದ ಸಿನಿಮಾ ತಾರೆ ಎಂದು ಹೆಸರು ಗಳಿಸಿದ್ದಾರೆ.  ‘ಬೇಷರಂ’ ಹಾಡಿನಲ್ಲಿ ಹಾಕಿದ ಬಟ್ಟೆ ವಿರುದ್ಧ ಟೀಕೆಗಳು ಬರುತ್ತಿರುವಾಗಲೇ, ದೀಪಿಕಾ ಫಿಫಾ ಕಪ್ ಅನಾವರಣಗೊಳಿಸಿದ್ದಕ್ಕೆ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟರ್‌ನಲ್ಲಿ ಈ ರೀತಿ ಕಮೆಂಟ್‌ ಮಾಡಿದ್ದಾರೆ. “ದೀಪಿಕಾ ನಿನ್ನನ್ನು ನೋಡಿದರೆ ನನಗೆ ಹೆಮ್ಮೆಯಾಗುತ್ತದೆ. ಈಗ ಈ ‘ಬೇಷರಂ ಬೀಗೋಟ್ಸ್’ ಫಿಫಾವನ್ನು ನಿಷೇಧ ಮಾಡ್ತಾರಾ?” ಎಂದು ಪ್ರಶ್ನಿಸುವ ಮೂಲಕ ದೀಪಿಕಾ ಅವರನ್ನು ಬೆಂಬಲಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!