ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ: ಕಲಬುರಗಿಯಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

ಹೊಸದಿಗಂತ ವರದಿ,ಕಲಬುರಗಿ:

ಜ.೨೨ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮಂದಿರದ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಬಂದು ಸಮಾಜ ಶಹಾಬಜಾರ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಾಜದ ಕಾರ್ಯದರ್ಶಿ ಈರಣ್ಣಾ ಗೊಳೆದ ತಿಳಿಸಿದ್ದಾರೆ.

ಬುಧವಾರ ಅವರು ವೀರಶೈವ ಲಿಂಗಾಯತ ಬಂದು ಸಮಾಜ ಶಹಾಬಜಾರ್ ಕಲಬುರಗಿ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ ಅವರು, ಜ.೨೨ರ ಸೋಮವಾರ ಬೆಳಿಗ್ಗೆ ೯ ಗಂಟೆಗೆ ಶಹಾಬಜಾರ್ ಮರಗಮ್ಮಾ ತಾಯಿಗೆ ಉಡಿ ತುಂಬುವ ಕಾರ್ಯಕ್ರಮ, ತದನಂತರ ಮಹಾಮಂಗಳಾರತಿ ನೆರವೇರಲಿದೆ. ನಂತರ ಚವದಾಪುರಿ ಹಿರೇಮಠ ಹಾಗೂ ಸುಲಪಲ ಮಠದ ಕರ್ತೃ ಗದ್ದುಗೆಗಳಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದರು.

ಬೆಳಿಗ್ಗೆ ೧೧ ಗಂಟೆಗೆ ಮರಗಮ್ಮಾ ದೇವಸ್ಥಾನದ ಆವರಣದಲ್ಲಿ ಪ್ರಭು ಶ್ರೀ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಮಾಜದ ಪದಾಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆಯಲಿದ್ದು, ಪೂಜೆಯ ನಂತರ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ತದನಂತರ ಮರಗಮ್ಮಾ ದೇವಸ್ಥಾನದಿಂದ ಶಹಾಬಜಾರ್ ರಾಮ ಮಂದಿರ ಹಾಗೂ ಲಾಲ್ ಹನುಮಾನ್ ಮಂದಿರವರೆಗೂ ಶ್ರೀರಾಮನ ಜೈಘೋಷ ಕೂಗುತ್ತಾ ಪಾದಯಾತ್ರೆ ಜರುಗಲಿದೆ ಎಂದು ಹೇಳಿದ್ದಾರೆ.

ಸಂಜೆಯ ಹೊತ್ತಿನಲ್ಲಿ ಚವದಾಪುರಿ ಹಿರೇಮಠ ಆವರಣದಲ್ಲಿ ದೀಪೋತ್ಸವ ಸಂಭ್ರಮ ಸಡಗರದಿಂದ ನಡೆಯಲಿದ್ದು, ತದನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಯಂತೆ ಪಠಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡಲಾಗುವುದು. ರಾತ್ರಿ ೮ ಗಂಟೆಯಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ಜರುಗಲಿದ್ದು,ಇಡೀ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಯಶಸ್ವಿಯಾಗಿ ಮಾಡಲು ಸಮಸ್ತ ಸಮಾಜದ ಗಣ್ಯರಲ್ಲಿ,ಸಾರ್ವಜನಿಕರಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!