ನನ್ನ ಸೊಸೆ ಚಾಮುಂಡೇಶ್ವರಿ ದೇವಿ ಕೊಟ್ಟ ಪ್ರಸಾದ: ರೇವತಿಯನ್ನ ಹಾಡಿ ಹೊಗಳಿದ ಎಚ್‌ಡಿಕೆ

ಹೊಸದಿಗಂತ ವರದಿ ರಾಮನಗರ :

ನನ್ನ ಸೊಸೆ ಆ ತಾಯಿ ಚಾಮುಂಡೇಶ್ವರಿ ನಮ್ಮ ಮನೆಗೆ ಕೊಟ್ಟ ಪ್ರಸಾದ. ಅವರು ಈ ಗ್ರಾಮದ ಸಾಮಂದಿಪುರದ ಮೊಮ್ಮಗಳು. ನಮಗೂ ಈ ಗ್ರಾಮಕ್ಕೂ ಬಾಂಧವ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಭಾವುಕರಾದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಸಾಮಂದಿಪುರದಲ್ಲಿ ಪ್ರಚಾರ ಭಾಷಣ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಈ ಗ್ರಾಮವು ಅವರ ಸೊಸೆ ಶ್ರೀಮತಿ ರೇವತಿ ಅವರ ಅಜ್ಜಿಯ ತವರು ಮನೆ. ರೇವತಿ ಅವರು ಆ ಹಳ್ಳಿಯ ಮೊಮ್ಮಗಳು. ಈ ವಿಷಯವನ್ನು ಸಭಿಕರೊಬ್ಬರು ಸಚಿವರಿಗೆ ನೆನಪಿಸಿಕೊಟ್ಟರು.

ಈ ವಿಷಯ ಗಮನಕ್ಕೆ ಬಂದ ಕೂಡಲೇ ಕ್ಷಣಕಾಲ ಭಾವುಕರಾದ ಹೆಚ್‌ ಡಿ ಕುಮಾರಸ್ವಾಮಿ ಅದು ಕೋವಿಡ್ ಸಮಯ. ಆಗ ನನ್ನ ಮಗ ನಿಖಿಲ್ ಅವರ ಮಾಡುವೆ ನಡೆಯಿತು. ರಾಮನಗರ ಚನ್ನಪಟ್ಟಣ, ಮಂಡ್ಯ ಭಾಗದ ಎಲ್ಲಾ ನನ್ನ ಜನರನ್ನು ಮದುವೆಗೆ ಕರೆದು ಊಟ ಹಾಕಬೇಕು ಎನ್ನುವ ಮಹದಾಸೆ ಹೊಂದಿದ್ದೆ. ಆದರೆ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಲಿಲ್ಲ. ಆ ಬಗ್ಗೆ ನಮ್ಮ ಕುಟುಂಬಕ್ಕೆ ಅತೀವ ನೋವಿದೆ ಎಂದು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!