ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಾರ ಭಾರತಿಯು ತನ್ನ ರೇಡಿಯೊ ಸೇವೆಗಳಲ್ಲಿ ʼಆಲ್ ಇಂಡಿಯಾ ರೇಡಿಯೊʼ ಬದಲು ʼಆಕಾಶವಾಣಿʼ ಎಂದು ಉಲ್ಲೇಖಿಸಲು ತೀರ್ಮಾನಿಸಿದೆ.
ಈ ಶಾಸನಬದ್ಧ ನಿಬಂಧನೆಯು ತಕ್ಷಣದಿಂದಲೇ ಜಾರಿಯಾಗಬೇಕು ಎಂದು ಆಕಾಶವಾಣಿ ಮಹಾನಿರ್ದೇಶಕಿ ವಸುಧಾ ಗುಪ್ತಾ ಆದೇಶಿಸಿದ್ದಾರೆ.
ಕೇಂದ್ರ ಸರಕಾರದ ಬಹಳ ಹಳೆಯ ನಿರ್ಧಾರ ಇದಾಗಿದ್ದು, ನಾವು ಅದನ್ನು ಈಗ ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ ತಿಳಿಸಿದ್ದಾರೆ.