ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವಿಟರ್ ನಲ್ಲಿ ಸಾಕಷ್ಟು ಫಾಲೋವರ‍್ಸ್ ಹೊಂದಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಖಾತೆ ಕ್ಲೋಸ್ ಮಾಡಿದ್ದಾರೆ.
ಯಶ್‌ಗೆ ಹುಟ್ಟುಹಬ್ಬದ ವಿಶ್ ಮಾಡುವಾಗ ಕೆಜಿಎಫ್ ಸಿನಿಮಾದ ಉರ್ದು ಡೈಲಾಗ್ ಬರೆದು ವಿಶ್ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಖಾತೆ ಕ್ಲೋಸ್ ಆಗಿದೆ.
ಕನ್ನಡದಲ್ಲಿ ಪ್ರಶಾಂತ್ ನೀಲ್ ಮಾಡಿದ ಸಿನಿಮಾ ಅವರಿಗೆ ಸಾಕಷ್ಟು ಹೆಸರು ಕೊಟ್ಟಿತ್ತು. ಅದಾಗ್ಯೂ ತೆಲುಗಿನ ಸಲಾರ್ ಮಾಡುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದರು. ಯಶ್ ಹುಟ್ಟುಹಬ್ಬದಂದು ಉರ್ದುವಿನಲ್ಲಿ ಮಾಡಿದ ಟ್ವೀಟ್‌ನಿಂದ ಕನ್ನಡಿಗರು ಗರಂ ಆಗಿದ್ದರು.
ಕನ್ನಡದಲ್ಲೇ ಟ್ವೀಟ್ ಮಾಡಿ ಎಂದು ಫಾಲೋವರ‍್ಸ್ ತಿರುಗಿ ಬಿದ್ದಿದ್ದರು. ಇದರಿಂದ ಬೇಸರಗೊಂಡ ನೀಲ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.