ಪ್ರವೀಣ್‌ಗೂ ನನ್ನ ಪತಿಯ ಪರಿಚಯವಿತ್ತು, ಅವರು ಇಂತಹ ಕೃತ್ಯವೆಸಗಿಲ್ಲ: ಬಂಧಿತ ಶಫೀಕ್ ಪತ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಅನಗತ್ಯವಾಗಿ ನಮ್ಮವರ ಮೇಲೆ ಕೊಲೆ ಆರೋಪಿಸ್ತಿದ್ದಾರೆ ಶಫೀಕ್ ಪತ್ನಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಂದು ಆರೋಪಿ ಶಫೀಕ್ ಪತ್ನಿ , ನನ್ನ ಪತಿ ಶಫೀಕ್‌ಗೂ, ಪ್ರವೀಣ್‌ಗೂ ಪರಿಚಯವಿತ್ತು. ನಮ್ಮ ಮಾವ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾವನನ್ನು ಕರೆದೊಯ್ಯಲು ಪ್ರವೀಣ್ ಬರುತ್ತಿದ್ರು. ಪ್ರವೀಣ್ ಹತ್ಯೆ ವಿಚಾರ ಕೇಳಿ ನನ್ನ ಗಂಡನಿಗೂ ಶಾಕ್ ಆಗಿದೆ. ಮಧ್ಯರಾತ್ರಿ ಬಂದು ನನ್ನ ಗಂಡನನ್ನು ಅರೆಸ್ಟ್ ಮಾಡಿದ್ದಾರೆ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ಯಾಕಾಗಿ ಟಿವಿಯಲ್ಲೆಲ್ಲಾ ಆರೋಪಿ ಅಂತ ಬರ್ತಿದೆ ಗೊತ್ತಾಗ್ತಾ ಇಲ್ಲ ಎಂದು ಆರೋಪಿ ಶಫೀಕ್ ಪತ್ನಿ ಹೇಳಿದ್ದಾರೆ.

ಶಫೀಕ್‌ ತಂದೆ ಮಾತನಾಡಿ, ಪೊಲೀಸರು ತನಿಖೆಗಾಗಿ ಮಗನನ್ನು ಕರೆದೊಯ್ದಿದ್ದು, 24 ಗಂಟೆ ಕಳೆದರೂ ಬಿಟ್ಟಿಲ್ಲ. ಅಲ್ಲದೆ, ಕೊಲೆ ಆರೋಪಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ಯಾವುದೇ ತಪ್ಪು ಮಾಡದವನ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಬಂಧಿತನಾಗಿರುವ ಶಫೀಕ್ ಬೆಳ್ಳಾರೆಯ ಮನೆಯವರು ಆರೋಪಿಸಿದ್ದಾರೆ.

ಶಫೀಕ್ ಎಸ್‌ಡಿಪಿಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಆತ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿಲ್ಲ. ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಅದರಲ್ಲಿ ಭಾಗವಹಿಸಿ ಬಂದ ಆತನನ್ನು ರಾತ್ರಿ ವೇಳೆಗೆ ವಿಚಾರಣೆಗೆಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಘಟನೆ ನಡೆದ ದಿನದಂದು ಆತ ಆಚೆ ಹೋಗಿದ್ದಾನೆ ಎಂದು ಈಗ ಹೇಳುತ್ತಿದ್ದು, ಅವನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಆಚೆ ಅವನು ಮಸೀದಿಗೆ ಹೋಗುತ್ತಿದ್ದ ಹೊರತು ಬೇರೆ ವಿಚಾರದಲ್ಲಿ ಅವನು ಭಾಗಿಯಾಗಿಲ್ಲ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!