ಡಿ. 21-22ರಂದು ನಿರ್ಮಲಾ ಸೀತಾರಾಮನ್​ರಿಂದ ಬಜೆಟ್ ಪೂರ್ವಭಾವಿ ಸಮಾಲೋಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್ ರೂಪಿಸಲು ನಿರತವಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಸೆಂಬರ್ 21 ಮತ್ತು 22ರಂದು ಎರಡು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ.

ಬಜೆಟ್ ಪೂರ್ವಭಾವಿ ಸಮಾಲೋಚನೆಗಳ ಸಭೆ ಹಾಗೂ ಜಿಎಸ್​ಟಿ ಮಂಡಳಿಯೊಂದಿಗೆ ಸಭೆ ಆ ಎರಡು ದಿನಗಳಲ್ಲಿ ನಡೆಯಲಿವೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು ಪಾಲ್ಗೊಳ್ಳಲಿದ್ದಾರೆ. ಆ ಸಭೆಯಲ್ಲಿ ಸಚಿವರುಗಳು ತಂತಮ್ಮ ರಾಜ್ಯಗಳ ಆದ್ಯತೆ ಮತ್ತು ತಮ್ಮ ಶಿಫಾರಸುಗಳನ್ನು ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ರಾಜಸ್ಥಾನದ ಜೋಧಪುರ್ ಅಥವಾ ಜೈಸಲ್ಮೇರ್ ನಗರದಲ್ಲಿ ಈ ಎರಡು ಸಭೆಗಳು ನಡೆಯಬಹುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!