ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಷ್ಟಾಂಗ ಯೋಗ ಗುರು ಶರತ್ ಜೋಯಿಸ್ ಹೃದಯಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೇರಿಕಾದ ವರ್ಜೀನಿಯಾದಲ್ಲಿ ಯೋಗ ಗುರುವಾಗಿ ನೆಲೆಸಿದ್ದರು.
ಶರತ್ ಜೋಯಿಸ್ ಅವರು ಅಜ್ಜ ಕೆ.ಪಟ್ಟಾಭಿ ಜೋಯಿಸ್ ಅವರಂತೆ ಯೋಗ ಶಾಲೆ ನಡೆಸುತ್ತಿದ್ದರು. ಮೈಸೂರಿನಲ್ಲಿ ಇವರದ್ದೇಯಾದ ಯೋಗ ಕೇಂದ್ರವಿದೆ.
ಖ್ಯಾತ ಯೋಗ ಗುರು ಶರತ್ ಜೋಯಿಸ್ ರವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.