ದಿನಭವಿಷ್ಯ: ಪರಿಶ್ರಮಕ್ಕೆ ತಕ್ಕಂತೆ ಯೋಗ್ಯವಾದ ಫಲ ಲಭಿಸುವ ಶುಭದಿನ

ಮೇಷ
ವೃತ್ತಿಯಲ್ಲಿ ಅಭಿವೃದ್ಧಿ ಸಾಧಿಸುವಿರಿ. ಹೊಸ ಅವಕಾಶ ಸಿಗಲಿದೆ. ಬಂಧು, ಮಿತ್ರರೊಂದಿಗೆ ವಾಗ್ವಾದ ನಡೆದೀತು. ಸಹನೆಯಿಂದ ವರ್ತಿಸುವುದು ಹಿತಕರ.

ವೃಷಭ
ಅನಿರೀಕ್ಷಿತ ಕಾರ್ಯ
ಗಳು ನಿಮ್ಮಿಂದ ಸಾಧ್ಯವಾದೀತು.  ಕೆಲವರಿಗೆ ಇದು ಅಚ್ಚರಿ ಮೂಡಿಸಬಹುದು. ಹಳೆಯ ತಪ್ಪು ತಿದ್ದಿ ಕೊಳ್ಳುವ ಅವಕಾಶ.

ಮಿಥುನ
ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಬೇಕಾಗುತ್ತದೆ.  ಆತುರ ತೋರದಿರಿ. ಹಣಕಾಸು ಮುಗ್ಗಟ್ಟು ನಿವಾರಣೆ.

ಕಟಕ
ಇತರರ ಸ್ವಭಾವವನ್ನು ಅರಿತು ಆಮೇಲೆ ಅವರೊಂದಿಗೆ ಸ್ನೇಹ ಬೆಳೆಸಿ. ಹಿಂದಿನ ಪರಿಶ್ರಮವೊಂದರ ಪ್ರತಿಫಲ ಇಂದು ದೊರಕಬಹುದು.

ಸಿಂಹ
ಖಾಸಗಿ ಬದುಕಲ್ಲಿ ಸಮಸ್ಯೆಗಳು. ಆದರೆ ನಿಮ್ಮ ಸಂವಹನ ಸಾಮರ್ಥ್ಯದಿಂದ ಅದನ್ನು ನಿಭಾಯಿಸುವಿರಿ. ಆರ್ಥಿಕ ಒತ್ತಡ.

ಕನ್ಯಾ
ಆರ್ಥಿಕವಾಗಿ ಉತ್ತಮ ದಿನ. ಖರ್ಚು ಕಡಿಮೆ, ಆದಾಯ ಹೆಚ್ಚು. ಮನೆಯಲ್ಲಿ ಸಂತೋಷ ಸಮಾರಂಭಕ್ಕೆ ಅವಕಾಶ ಒದಗಬಹುದು. ಬಂಧು ಮಿತ್ರರ ಭೇಟಿ.

ತುಲಾ
ಉತ್ಸಾಹದ ದಿನ. ಆಪ್ತರೊಂದಿಗೆ ಆತ್ಮೀಯವಾಗಿ ಕಾಲ ಕಳೆಯುವ ಅವಕಾಶ. ಮೋಜು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ.

ವೃಶ್ಚಿಕ
ವೃತ್ತಿಯಲ್ಲಿ ಮತ್ತು ಮನೆಯಲ್ಲಿ ಕೆಲವು ಸವಾಲುಗಳನ್ನು ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಬೇಕು. ಆರೋಗ್ಯ ಸಮಸ್ಯೆ.

ಧನು
ಒತ್ತಡಗಳಿದ್ದರೂ ನಿಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಅದು ಮೆಚ್ಚುಗೆ ಗಳಿಸುತ್ತದೆ. ಕೌಟುಂಬಿಕ ಸಂತೋಷ, ಸಾಮರಸ್ಯ.

ಮಕರ
ನಿಮ್ಮ ಸಾಮರ್ಥ್ಯದ ಮೇಲೆ ನಿಮಗೇ ಅಪನಂಬಿಕೆ. ಆದರೆ ಆತ್ಮವಿಶ್ವಾಸದಿಂದ ಮುನ್ನಡೆದರೆ ನಿಮಗೆ ಯಶಸ್ಸು ಖಂಡಿತ. ಆರೋಗ್ಯ ಸುಧಾರಣೆ.

ಕುಂಭ
ಪ್ರೀತಿಯ ಆಕರ್ಷಣೆಗೆ ಒಳಗಾಗುವ ಸಾಧ್ಯತೆ. ವೃತ್ತಿಯಲ್ಲಿ  ಕೆಲವರಿಂದ ಕಿರುಕುಳ ಅನುಭವಿಸುವಿರಿ. ಕೌಟುಂಬಿಕ ಅಸಹಕಾರ, ಅಸಮಾಧಾನ.

ಮೀನ
ವೃತ್ತಿ ಕ್ಷೇತ್ರದಲ್ಲಿ  ಇತರರ ಮೇಲೆ ಮೇಲುಗೈ ಸಾಧಿಸುವಿರಿ. ನಿಮ್ಮ ನಿರ್ವಹಣೆ ಉತ್ತಮ ಫಲ ನೀಡಲಿದೆ. ಕೌಟುಂಬಿಕ ಶಾಂತಿ, ಸಮಾಧಾನ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!