ಮೇಷ
ಸಂಗಾತಿ ಜತೆಗೆ, ಸ್ನೇಹಿತರ ಜತೆಗೆ ಇಂದು ಉತ್ತಮ ಹೊಂದಾಣಿಕೆ ಸಾಧಿಸುವಿರಿ. ಆರ್ಥಿಕವಾಗಿ ಉನ್ನತಿ. ಮಕ್ಕಳು ಆಟದಲ್ಲಿ ಎಚ್ಚರಿಕೆ ವಹಿಸಬೇಕು.
ವೃಷಭ
ಯಾವುದೇ ವಿಚಾರದಲ್ಲಿ ಹಿರಿಯರ ಜತೆ ಪೈಪೋಟಿಗೆ ಇಳಿಯುವ ಮುನ್ನ ಯೋಚಿಸಿ. ಪರಿಸ್ಥಿತಿ ನಿಮಗೆ ಪ್ರತಿಕೂಲ ಆದೀತು. ಖರ್ಚು ಹೆಚ್ಚಳ.
ಮಿಥುನ
ಕೆಲವು ಭಾವನೆ ವ್ಯಕ್ತಪಡಿಸಬೇಕೆಂಬ ತುಡಿತ. ಆದರೆ ಹಿಂಜರಿಕೆ ಕಾಡುವುದು. ಹಣದ ವ್ಯವಹಾರದಲ್ಲಿ ಇಂದು ಎಚ್ಚರ ಅವಶ್ಯ. ನಷ್ಟವಾಗುವ ಸಾಧ್ಯತೆ.
ಕಟಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಆರ್ಥಿಕ ಉನ್ನತಿ. ಪಡೆದ ಸಾಲ ತೀರಿಸಲು ಶಕ್ತರಾಗುವಿರಿ. ಆಪ್ತರ ಜತೆ ಪ್ರವಾಸದ ಅವಕಾಶವಿದೆ. ಕೌಟುಂಬಿಕ ನೆಮ್ಮದಿ.
ಸಿಂಹ
ಹೆಚ್ಚು ಹೊಣೆಗಾರಿಕೆ, ಅಧಿಕ ಒತ್ತಡ. ಸಹನೆ ಯಿಂದ ವರ್ತಿಸುವುದು ಅವಶ್ಯ. ಕೌಟುಂಬಿಕ ಸಹಕಾರ. ಕಣ್ಣಿನ ಕಿರಿಕಿರಿ ಅಥವಾ ಕಾಲು ನೋವು ಉಂಟಾದೀತು.
ಕನ್ಯಾ
ಉದ್ಯೋಗದಲ್ಲಿ ಉನ್ನತಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಹೊರಾಂಗಣ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಆರೋಗ್ಯದ ಕುರಿತು ಕಾಳಜಿ ಇರಲಿ.
ತುಲಾ
ವೃತ್ತಿಪರವಾಗಿ ಉತ್ತಮ ದಿನವಲ್ಲ. ಹಿನ್ನಡೆ ಉಂಟಾದೀತು. ಸ್ವಂತ ಉದ್ಯೋಗಿಗಳಿಗೆ ಹಣದ ಕೊರತೆ. ಹೊಟ್ಟೆ ಕೆಡುವಂತಹ ಪ್ರಸಂಗ ಸಂಭವ.
ವೃಶ್ಚಿಕ
ಹಣಕಾಸು ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಿ. ಅವರಿಂದ ಪರಿಹಾರ ದೊರಕಬಹುದು. ಕಠಿಣ ನಿರ್ಧಾರ ತಳೆಯಲು ಹಿಂಜರಿಯಬೇಡಿ. ಆರೋಗ್ಯ ಸ್ಥಿರ.
ಧನು
ನೀವಿಂದು ದೃಢ ಮನಸ್ಸು ತೋರುವಿರಿ. ಅದರಿಂದಾಗಿ ನಿಮ್ಮ ಸಮಸ್ಯೆ ಪರಿಹರಿಸಲು ಶಕ್ತರಾಗುವಿರಿ. ಹಣದ ಪೂರೈಕೆ ಅಭಾದಿತ. ಕೌಟುಂಬಿಕ ಸಹಕಾರ.
ಮಕರ
ವೃತ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರದಿಂದ ವ್ಯವಹರಿಸಿ. ಇತರರ ತಪ್ಪಿಗೆ ನೀವು ಹೊಣೆಗಾರರಾಗದಿರಿ. ವ್ಯವಹಾರದಲ್ಲಿ ವಾಗ್ವಾದ ನಡೆದೀತು.
ಕುಂಭ
ಅನಿರೀಕ್ಷಿತ ಧನಲಾಭ. ಆತ್ಮೀಯರ ಜತೆಗೆ ಉಂಟಾಗಿದ್ದ ವೈಮನಸ್ಸು ಪರಿಹಾರ. ಸೌಹಾರ್ದ ನೆಲೆಸುವುದು. ಬಂಧುವೊಬ್ಬರು ಕಿರಿಕಿರಿ ಸೃಷ್ಟಿಸುವರು.
ಮೀನ
ಕುಟುಂಬ ಸದಸ್ಯರ ಜತೆ ಇಂದು ಆತ್ಮೀಯ ಕಾಲಕ್ಷೇಪ. ಯಾವುದೇ ವಾದವಿವಾದಕ್ಕೆ ಆಸ್ಪದ ಕೊಡಬೇಡಿ. ಆರೋಗ್ಯ ಸಮಸ್ಯೆ ಬೇಗನೆ ನಿವಾರಿಸಿಕೊಳ್ಳಿ.