ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲು ಹಳಿಗಳ ಮೇಲೆ ವಿವಿಧ ಪರಿಕರಗಳನ್ನು ಇಟ್ಟು ವಿಧ್ವಂಸಕ ಕೃತ್ಯ ಎಸಗಲು ಪ್ರಯತ್ನಿಸುವವರ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ.
ಈ ಕುರಿತು , ರೈಲ್ವೆ ಆಡಳಿತವು ಅಲರ್ಟ್ ಆಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯೊಂದಿಗೆ ಚರ್ಚೆ ನಡೆಸಿದೆ.
ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದು, ಸಂಭವನೀಯ ವಿಧ್ವಂಸಕ ಪ್ರಯತ್ನಗಳ ಬಗ್ಗೆ ರೈಲ್ವೆ ಆಡಳಿತವು ಎಚ್ಚರವಾಗಿದೆ. ಯಾವುದೇ ಅಹಿತಕರ ಘಟನೆಯನ್ನ ತಡೆಯಲು ಹಲವು ರಾಜ್ಯಗಳ ಆಡಳಿತವು ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. .
ಕೇಂದ್ರ ಸರ್ಕಾರವು (ರೈಲ್ವೆ) ಭದ್ರತಾ ಬೆದರಿಕೆಗಳನ್ನ ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಅಂತಹ ಅಪಘಾತವನ್ನ ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೆಯ ಸಂಪೂರ್ಣ ಆಡಳಿತವು ಸಂಪೂರ್ಣ ಜಾಗರೂಕವಾಗಿದೆ. ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ, ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಗೃಹ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂವಹನವಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA ) ಸಹ ಇದರಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.