ದಿನಭವಿಷ್ಯ: ಗ್ರಹಗಳ ಸ್ಥಾನ ಬದಲಾವಣೆ, ಯಾವ ರಾಶಿಗೆ ಶುಭ?

ಮೇಷ
ಈ ದಿನ ನಿಮಗೆ ಕೆಲವು ಸಿಹಿಕಹಿ ಅನುಭವ ಉಂಟುಮಾಡಲಿದೆ. ನಿಮ್ಮ ಘನತೆಗೆ ಕುಂದು ತರುವ ಕಾರ್ಯಕ್ಕೆ ಮಾಡದಿರಿ. ಶಾಂತ ಮನಸ್ಥಿತಿ ಇರಲಿ.

ವೃಷಭ
ಬೇಸರದ ಬೆಳವಣಿಗೆ ಉಂಟಾದೀತು. ಆದರೆ ಬದುಕಿನ ಗುಣಾತ್ಮಕ ಅಂಶಗಳತ್ತ ನೋಡಿರಿ. ಅದರಿಂದ ಸ್ಫೂರ್ತಿ ಪಡೆಯಿರಿ. ಆರೋಗ್ಯಕ್ಕೆ ಆದ್ಯತೆ ಕೊಡಿ.

ಮಿಥುನ
ಸಂಬಂಧದಲ್ಲಿ ಉಂಟಾಗಿದ್ದ ಕೋಲಾಹಲ ಇಂದು ಶಮನಗೊಳ್ಳಲಿದೆ. ಆದ್ಯತೆಯ ಪ್ರಕಾರ ಕಾರ್ಯ ಕೈಗೆತ್ತಿಕೊಳ್ಳಿ. ಆರ್ಥಿಕ ಸ್ಥಿತಿ ಸ್ಥಿರ.

ಕಟಕ
ಇಂದು ಯಾವುದೇ ಕಾರ್ಯ ಎಸಗಿದರೂ ನಿಮಗೆ ಯಶ ಸಿಗಲಿದೆ. ನಿಮ್ಮ ಇಷ್ಟದ ವ್ಯಕ್ತಿ ನಿಮ್ಮೆಡೆಗೂ ಅದೇ ಭಾವ ತೋರಿಸುವರು. ದೇಹಾರೋಗ್ಯ ಕಾಪಾಡಿ.

ಸಿಂಹ
ಕೆಲಸದ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ವಿರಾಮ ದೊರಕುವುದು. ಆಪ್ತರೊಂದಿಗೆ ಸಮಯ ಕಳೆಯಲು ಇದು ಸಹಕಾರಿಯಾಗಲಿದೆ.

ಕನ್ಯಾ
ವಿನಯವಂತಿಕೆ ಒಳ್ಳೆಯದು. ಆದರೆ ನಿಮ್ಮನ್ನು ಇತರರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಾರು. ಅದಕ್ಕೆ ಅವಕಾಶ ನೀಡದಿರಿ.

ತುಲಾ
ಸಂಗಾತಿ ಜತೆಗಿನ ಸಂಬಂಧದ ಕುರಿತು ಗಟ್ಟಿ ನಿರ್ಧಾರ ತಾಳಬೇಕಾದ ಸಮಯ ಬಂದಿದೆ. ಅನಿಶ್ಚಿತತೆ ಇನ್ನೂ ಮುಂದುವರಿಸುವುದು ತರವಲ್ಲ.

ವೃಶ್ಚಿಕ
ಯಾವುದೇ ಕಾರ್ಯದಲ್ಲಿ ಇಂದು ನಿಮಗೆ ಕ್ಷಿಪ್ರ ಫಲ ದೊರಕದು. ಎಲ್ಲವೂ ನಿಧಾನ. ಹಾಗೆಂದು ಉತ್ಸಾಹ ಕುಂದದಿರಲಿ.  ಹತ್ತಿರದ ಬಂಧುಗಳಿಂದ ಶುಭ ಸುದ್ದಿ.

ಧನು
ಹೊಸತೇನಾದರೂ ಮಾಡಲು ತುಡಿತ ಉಂಟಾಗುವುದು. ಹಿಂಜರಿಕೆ ಬೇಡ, ಅದರಲ್ಲಿ  ಮುಂದುವರಿಯಿರಿ. ಯಶ ನಿಮ್ಮದಾಗಲಿದೆ.

ಮಕರ
ಮಹತ್ವದ ನಿರ್ಧಾರ, ಕಾರ್ಯ ಇಂದು ಮಾಡದಿರಿ. ಅದನ್ನು ಮುಂದಕ್ಕೆ ಹಾಕಿ. ಗೊಂದಲಭರಿತ ಮನಸ್ಸಿಗೆ ಕುಟುಂಬಸ್ಥರ ಸಾಂತ್ವನ ಸಿಗುವುದು.

ಕುಂಭ
ನಿಮ್ಮಿಂದಾಗದ ಭರವಸೆ ನೀಡಲು ಹೋಗದಿರಿ. ಅದರಿಂದ ನಿಮ್ಮ ವರ್ಚಸ್ಸಿಗೆ ಹಾನಿ. ಉದ್ಯೋಗ ಬದಲಾವಣೆ ಬಯಸುವವರಿಗೆ ಅವಕಾಶ ಸಿಗಲಿದೆ.

ಮೀನ
ಮನೆಯವರ ಮೇಲೆ ನಿಮ್ಮ ಅಭಿಪ್ರಾಯ ಹೇರದಿರಿ. ಅವರ ಮಾತಿಗೂ ಕಿವಿಗೊಡಿ. ಮಕ್ಕಳ ಆರೋಗ್ಯ ಮನಸ್ಸಿನ ನೆಮ್ಮದಿ ಕದಡಬಹುದು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!